ಸಂಗ್ರಹ ಚಿತ್ರ 
ದೇಶ

ಉಪವಾಸ ಮಾಡಲಿಲ್ಲವೆಂದು ಪತ್ನಿಗೆ ಇರಿದು, ತಾನು ಆತ್ಮಹತ್ಯೆಗೆ ಶರಣಾದ ಪತಿ

ಹೆಂಗಳೆಯರ ಹಬ್ಬವೆಂದೇ ಪ್ರಸಿದ್ಧಿ ಪಡೆದ ಕರ್ವಾ ಚೌತ್ ಪ್ರಯುಕ್ತ ಪತ್ನಿ ಉಪವಾಸ ಮಾಡಿಲಿಲ್ಲ ಎಂಬ ಕೋಪಕ್ಕೆ ಪತಿರಾಯ ಆಕೆಗೆ ಚೂರಿಯಿಂದ ಇರಿದು ತಾನು...

ನವದೆಹಲಿ: ಹೆಂಗಳೆಯರ ಹಬ್ಬವೆಂದೇ ಪ್ರಸಿದ್ಧಿ ಪಡೆದ ಕರ್ವಾ ಚೌತ್ ಪ್ರಯುಕ್ತ ಪತ್ನಿ ಉಪವಾಸ ಮಾಡಿಲಿಲ್ಲ ಎಂಬ ಕೋಪಕ್ಕೆ ಪತಿರಾಯ ಆಕೆಗೆ ಚೂರಿಯಿಂದ ಇರಿದು ತಾನು ಅಪಾರ್ಟ್ ಮೆಂಟ್ ನಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. 
ಉತ್ತರ ದೆಹಲಿಯ ರೋಹಿನಿಯಲ್ಲಿ ಈ ಘಟನೆ ನಡೆದಿದ್ದು ಪತಿಯಿಂದ ಚೂರಿ ಇರಿತಕ್ಕೆ ಒಳಗಾದ ಪತ್ನಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕಟ್ಟಡದಿಂದ ಹಾರಿದ್ದ ಜಸ್ವೀಂದರ್ ಸಿಂಗ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. 
ದಂಪತಿಗೆ ನಾಲ್ಕು ವರ್ಷದ ಮಗಳಿದ್ದು ಅನಿವಾರ್ಯ ಕಾರಣದಿಂದ ದಂಪತಿಗಳು ದೂರವಿದ್ದು ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಅಣತಿಯಂತೆ ವಾರಾಂತ್ಯದಲ್ಲಿ ಮಗಳನ್ನು ನೋಡಲು ಪತಿಗೆ ಅವಕಾಶ ನೀಡಿದ್ದರಿಂದ ಪತ್ನಿಯ ಮನೆಗೆ ತೆರಳಿದ್ದರು. 
ಈ ವೇಳೆ ಇಬ್ಬರ ಮದುವೆ ಮಾತಿಗೆ ಮಾತು ಶುರುವಾಗಿ ಸಹಾಯಕ್ಕಾಗಿ ಆಕೆ ಜೋರಾಗಿ ಕೂಗಿಕೊಂಡಿದ್ದಾಳೆ. ಇದರಿಂದ ವಿಚಲಿತನಾದ ಜಸ್ವೀಂದರ್ ಸಿಂಗ್ ಅಡುಗೆ ಮನೆಗೆ ಹೋಗಿ ಚೂರಿ ತಂದು ಆಕೆಗೆ ಇರಿದು ನಂತರ ಕಟ್ಟಡದ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 
ಮಹಿಳೆಯ ಕಿರುಚಾಟ ಕೇಳಿಸಿಕೊಂಡ ನೆರೆಮನೆಯರು ಆಗಮಿಸಿ ಪತಿ-ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದರಾದರು ಮಾರ್ಗಮಧ್ಯೆ ಪತಿ ಅನುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel