ಆಗ್ರಾ: ವಿಶ್ವವಿಖ್ಯಾತ ತಾಜ್'ಮಹಲ್'ನ್ನು ರಾಜ್ಯದ ಪ್ರವಾಸೋದ್ಯಮ ಕೈಪಿಡಿಯಿಂದ ಕೈಬಿಟ್ಟಿರುವ ಸರ್ಕಾರದ ನಿರ್ಧಾರ ಸರಿಯಾಗಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಅವರ ಸಂಪುಟದಲ್ಲಿರುವ ಸಚಿವ ಲಕ್ಷ್ಮಿ ನಾರಾಯಣ ಚೌಧರಿಯವರು ಹೇಳಿದ್ದಾರೆ.
ಪ್ರವಾಸೋದ್ಯಮ ಸಚಿವೆ ರಿತಾ ಬಹುಗುಣ ಅವರು ಇತ್ತೀಚೆಗಷ್ಟೇ ಕೈಪಿಡಿಯೊಂದನ್ನು ಬಿಡುಗಡೆಗೊಳಿಸಿದ್ದರು. ಈ ಕೈಪಿಡಿಯಲ್ಲಿ ಉತ್ತರಪ್ರದೇಶದ ಎಲ್ಲಾ ಪ್ರಮುಖ ಪ್ರವಾಸೋದ್ಯಮ ತಾಣಗಳನ್ನು ಉಲ್ಲೇಖಿಸಲಾಗಿದೆ. ಗೋರಖ್ಪುರದ ದೇವಸ್ತಾನ, ಕೆಲವು ಪಾರಂಪರಿಕ ತಾಣಗಳು, ರಾಮಾಯಣದ ಪೌರಾಣಿಕ ತಾಣಗಳ ಬಗ್ಗೆಯೂ ಕರಪತ್ರದಲ್ಲಿ ಬರೆಯಲಾಗಿದ್ದು, ಪಟ್ಟಿದಲ್ಲಿ ವಿಶ್ವಪ್ರಸಿದ್ಧ ಉತ್ತರಪ್ರದೇಶದ ಆಗ್ರ ಪ್ರವಾಸೀ ತಾಣವಾದ ತಾಜ್ ಮಹಲ್ ಹೆಸರನ್ನೇ ಉಲ್ಲೇಖಿಸದಿರುವುದರಿಂದ ವಿವಾದ ಸೃಷ್ಟಿಯಾಗಿದೆ.
ವಿವಾದ ಕುರಿತಂತೆ ಎಬಿವಿಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಚಿವ ಲಕ್ಷ್ಮಿ ನಾರಾಯಣ ಚೌಧರಿಯವರು, ತಾಜ್ ಮಹಲ್ ಯಾವುದೇ ಧರ್ಮದ ಪ್ರತೀಕವಲ್ಲ. ರಾಜ್ಯದ ಪ್ರವಾಸೋದ್ಯಮ ಕೈಪಿಡಿಯಿಂದ ತಾಜ್ ಮಹಲ್ ನ್ನು ದೂರವಿಟ್ಟಿರುವ ಸರ್ಕಾರದ ನಿರ್ಧಾರ ಸರಿಯಾಗಿದೆ. ಕೈಪಿಡಿಯಲ್ಲಿ ಇದೀಗ ತಾಜ್ ಮಹಲ್ ಇದ್ದ ಸ್ಥಾನಕ್ಕೆ ಗುರು ಗೋರಖ್'ನಾಥ್ ಪೀಠ್'ನ್ನು ಸೇರ್ಪಡೆಗೊಳಿಸಬೇಕೆಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics