ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ವಿಧಾನ ಪರಿಷತ್ ಸದಸ್ಯ ಫಾರೂಖ್ ಹುಸೇನ್ 
ದೇಶ

ಎನ್ಆರ್ ಐ ಮಹಿಳೆ ಮೇಲೆ ತೆಲಂಗಾಣ ಎಂಎಲ್ ಸಿ ಹಲ್ಲೆ, ವಿಡಿಯೋ ವೈರಲ್

ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ವಿಧಾನ ಪರಿಷತ್ ಸದಸ್ಯ ಮಹಿಳೆ ಮೇಲೆ ಹಲ್ಲೆ ನಡೆಸಿ ಪಾದರಕ್ಷೆಯಿಂದ ಹೊಡೆದ ಘಟನೆ ಮೊಬೈಲ್

ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್)  ವಿಧಾನ ಪರಿಷತ್ ಸದಸ್ಯ ಮಹಿಳೆ ಮೇಲೆ ಹಲ್ಲೆ ನಡೆಸಿ ಪಾದರಕ್ಷೆಯಿಂದ ಹೊಡೆದ ಘಟನೆ ಮೊಬೈಲ್ ಕ್ಯಾಮರಾದಲ್ಲಿ ದಾಖಲಾಗಿದ್ದು ಆ ವಿಡಿಯೋವೀಗ ವೈರಲ್ ಆಗಿದೆ.
ಟಿಆರ್ ಎಸ್ ನ ವಿಧಾನ ಪರಿಷತ್ ಸದಸ್ಯ ಫಾರೂಖ್ ಹುಸೇನ್ ಅನಿವಾಸಿ ಭಾರತೀಯ ಮಹಿಳೆ ಮೇಲೆ ಕೆಟ್ಟ ಶಬ್ದಗಳಿಂದ ನಿಂದಿಸಿ ಆಕೆಗೆ ಬೆದರಿಕೆ ಹಾಕಿದ್ದರು ಎಂದು ಐಎಎನ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಇಡೀ ಘಟನೆಯನ್ನು ಮಹಿಳೆಯ ಸಂಬಂಧಿಕರೊಬ್ಬರು ಮೊಬೈಲ್ ಫೋನ್ ನಲ್ಲಿ ದಾಖಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದರು.
ಹಲ್ಲೆಗೀಡಾದ ಮಹಿಳೆ ಅಮ್ಟು ವಸೇ ಪೊಲೀಸರಿಗೆ ದೂರು ನೀಡಿದ್ದು,  ವಿಧಾನ ಪರಿಷತ್ ಸದಸ್ಯ ಫಾರೂಕ್ ಹುಸೇನ್ ತನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಲ್ಲದೆ ತಮ್ಮ ಪಾದರಕ್ಷೆಯಿಂದ ನನಗೆ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಹೈದರಾಬಾದಿನ ನಂಪಲ್ಲಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಅಮೆರಿಕಾದಿಂದ ಹಿಂತಿರುಗಿದ್ದ ಮಹಿಳೆ ಹೈದರಾಬಾದಿನ ಲಕ್ಡಿ ಕಾ ಪುಲ್ ಪ್ರದೇಶದಲ್ಲಿ ತಮ್ಮ ಫ್ಲಾಟ್ ನಲ್ಲಿ ಬಾಡಿಗೆಗೆ ವಾಸಿಸುತ್ತಿದ್ದ ಹುಸೇನ್ ರಿಗೆ ಮನೆ ತೆರವುಗೊಳಿಸುವಂತೆ ಹೇಳಿದ್ದರು. ಅದಕ್ಕೆ ನಿರಾಕರಿಸಿದಾಗ ಮುಖ್ಯಮಂತ್ರಿಗೆ ದೂರು ನೀಡುವುದಾಗಿ ಮಹಿಳೆ ಹೇಳಿದ್ದಾರೆ. 
ಇದರಿಂದ ಕುಪಿತರಾದ ಹುಸೇನ್ ಮಹಿಳೆಯನ್ನು ನಿಂದಿಸಿದ್ದು ಮಾತ್ರವಲ್ಲದೆ ತಮ್ಮ ಕಾಲಿನಿಂದ ಪಾದರಕ್ಷೆ ತೆಗೆದು ಹೊಡೆಯಲು ಬಂದರು ಎನ್ನಲಾಗಿದೆ.
ಹುಸೇನ್ ಕಳೆದ ಆರು ವರ್ಷಗಳಿಂದ ಫ್ಲಾಟ್ ನಲ್ಲಿ ವಾಸಿಸುತ್ತಿದ್ದು ಕಳೆದ ಕೆಲ ತಿಂಗಳುಗಳಿಂದ ಬಾಡಿಗೆ ನೀಡಿರಲಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ: ಇಬ್ಬರಿಗೆ ಗಾಯ, ಇರಾನ್ ರಾಯಭಾರಿಗೆ ಅಜರ್ ಬೈಜಾನ್ ಸಮನ್ಸ್!

T20 World Cup 2026 ಸೆಮಿಫೈನಲ್: ಸ್ಯಾಮ್ಸನ್ ಮಿಂಚಿನ ಅರ್ಧಶತಕ; ಇಂಗ್ಲೆಂಡ್ ಗೆ ಬೃಹತ್ 254 ರನ್ ಟಾರ್ಗೆಟ್ ನೀಡಿದ ಭಾರತ!

T20 World Cup 2026: 2ನೇ ಸೆಮಿಫೈನಲ್; ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಇಂಗ್ಲೆಂಡ್!

ಪಶ್ಚಿಮ ಬಂಗಾಳ ರಾಜ್ಯಪಾಲ ಸಿವಿ ಆನಂದ ಬೋಸ್ ದಿಢೀರ್ ರಾಜೀನಾಮೆ; ರವಿಗೆ ಹೆಚ್ಚುವರಿ ಜವಾಬ್ದಾರಿ

ಮೋದಿ ಟೀಕೆ, ಪದೇ ಪದೇ ಗ್ಯಾರಂಟಿಗಳ ಉಲ್ಲೇಖ ಸಿದ್ದರಾಮಯ್ಯ ಬಜೆಟ್‌ನ ಮುಖ್ಯಾಂಶಗಳು: ಆರ್ ಅಶೋಕ್ ಭವಿಷ್ಯ

SCROLL FOR NEXT