ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ 
ದೇಶ

ಹಿಂದೂ ದೇವತೆಯ ಶ್ಲೋಕ ತಪ್ಪಾಗಿ ಹಾಡಿದ ಮುಸ್ಲಿಂ ಗಾಯಕನ ಬರ್ಬರ ಹತ್ಯೆ, ಗ್ರಾಮ ತೊರೆದ 200 ಮುಸ್ಲೀಮರು

ಹಿಂದೂ ದೇವತೆಯ ಶ್ಲೋಕಗಳನ್ನು ತಪ್ಪಾಗಿ ಹಾಡಿದ ಮುಸ್ಲಿಂ ಜನಪದ ಗಾಯಕರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು...

ಜೈಪುರ: ಹಿಂದೂ ದೇವತೆಯ ಶ್ಲೋಕಗಳನ್ನು ತಪ್ಪಾಗಿ ಹಾಡಿದ ಮುಸ್ಲಿಂ ಜನಪದ ಗಾಯಕರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು ಕೊಲೆ ಬಳಿಕ ಭಯಭೀತರಾಗಿರುವ 200ಕ್ಕೂ ಹೆಚ್ಚು ಮುಸ್ಲಿಂರು ಗ್ರಾಮ ತೊರೆದಿರುವ ಘಟನೆ ರಾಜಸ್ಥಾನದ ದಾಂತಲ್ ನಲ್ಲಿ ನಡೆದಿದೆ. 
ಪಾಕ್ ಗಡಿ ಭಾಗಕ್ಕೆ ಹೊಂದಿಕೊಂಡಂತಿರುವ ರಾಜಸ್ಥಾನದ ಜೈಪುರದ ದಾಂತಲ್ ಗ್ರಾಮದಲ್ಲಿ ಮುಸ್ಲಿಂರು ಪಲಾಯನಗೈದಿದ್ದು ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳ ಬಳಿ ಆಶ್ರಯ ಪಡೆದಿದ್ದಾರೆ. 
ಸೆಪ್ಟೆಂಬರ್ 27ರಂದು ಮುಸ್ಲಿಂ ಜನಪದ ಗಾಯಕ 45ರ ಹರೆಯದ ಅಹಮದ್ ಖಾನ್ ಎನ್ನುವವರು ಸಮಾರಂಭವೊಂದರಲ್ಲಿ ಹಾಡುತ್ತಿರುವ ವೇಳೆ ಹಿಂದೂ ದೇವತೆಯ ಶ್ಲೋಕಗಳನ್ನು ತಪ್ಪಾಗಿ ಪಠಿಸಿದ್ದಾರೆ. ಈ ವೇಳೆ ತಕರಾರು ತೆಗೆದ ಅರ್ಚಕ ರಮೇಶ್ ಸುತಾರ್ ಎಂಬಾತ ತನ್ನ ಬೆಂಬಲಿಗರೊಂದಿಗೆ ಬಂದು ಸಂಗೀತ ಪರಿಕರಗಳನ್ನು ಧ್ವಂಸಗೈದು ಮಾರಣಾಂತಿಕವಾಗಿ ಥಳಿಸಿ ಖಾನ್ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದರು.
ಲಾಂಗ ಮಂಗನಿಯಾರ್ ಜನಾಂಗಕ್ಕೆ ಸೇರಿದ ಗಾಯಕ ಅಮಹದ್ ಖಾನ್ ಅವರು ಹಿಂದೂ ದೇವರ ಗೀತೆಗಳನ್ನು ದೇವಾಲಯಗಳಲ್ಲಿ ಹಾಡುತ್ತಿದ್ದರು. ತಲೆಮಾರುಗಳಿಂದ ಅವರ ಕುಟುಂಬ ಈ ಸಂಪ್ರದಾಯ ಆಚರಿಸಿಕೊಂಡು ಬಂದಿತ್ತು. ಇದೀಗ ಗಾಯಕನ ಕೊಲೆಯಿಂದಾಗಿ ಹೆದರಿರುವ ಗ್ರಾಮಸ್ಥರು ತಮ್ಮ ಮನೆಗಳಿಗೆ ಮರಳಲು ಹೆದರುತ್ತಿದ್ದಾರೆ. ಗ್ರಾಮಕ್ಕೆ ಸರ್ಕಾರ ಪ್ಯಾರ ಮಿಲಿಟರಿ ಪಡೆಗಳನ್ನು ಕಳುಹಿಸಿ ಭದ್ರತೆ ಕೈಗೊಳ್ಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ 'ಸೀಸನಲ್ ಫ್ಲೂ' ಹೆಚ್ಚಳ ಹಿನ್ನೆಲೆ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ!

video| ಹವಾಮಾನ ಬದಲಾವಣೆ: ಸುಡುವ ಮರಳುಗಾಡಲ್ಲಿ ಕಂಡು ಕೇಳರಿಯದ ಹಿಮಪಾತ!

Epstein files: ನ್ಯಾಯಾಂಗ ಇಲಾಖೆ ವೆಬ್‌ಪುಟದಿಂದ ಟ್ರಂಪ್ ಫೋಟೋ ಸೇರಿ ಕನಿಷ್ಠ 16 ದಾಖಲೆಗಳು ಕಣ್ಮರೆ..!

ಚಳಿಗಾಲದ ಅಧಿವೇಶನ ಮುಕ್ತಾಯ: 2026-27ನೇ ಸಾಲಿನ ರಾಜ್ಯ ಬಜೆಟ್'ಗೆ ಸಿದ್ದರಾಮಯ್ಯ ಸಿದ್ಧತೆ: ಈ ಬಾರಿ ಬಜೆಟ್ ಗಾತ್ರ, ಸಾಲ ಪ್ರಮಾಣ ಹೆಚ್ಚಳ ಸಾಧ್ಯತೆ..!

ಸಿದ್ದು ಅತ್ಯಾಪ್ತ ರಾಜಣ್ಣ ಭೇಟಿಯಾದ ಡಿಕೆ ಶಿವಕುಮಾರ್, ಏನಿದರ ಗುಟ್ಟು?

SCROLL FOR NEXT