ದೇಶ

ದೆಹಲಿ ಮುಖ್ಯಮಂತ್ರಿಗಳ ಖಾಸಗಿ ಕಾರ್ ಕಳ್ಳತನವಾಗಿದೆ!

Vishwanath S
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬ್ಲೂ ವ್ಯಾಗನ್ ಆರ್ ಕಾರು ಕಳ್ಳತನವಾಗಿದೆ. 
ಗುರುವಾರ ಮಧ್ಯಾಹ್ನ ದೆಹಲಿಯ ಸಚಿವಾಲಯದ ಮುಂಭಾಗದಿಂದಲೇ ಕಾರು ಕಳ್ಳತನವಾಗಿದ್ದು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಕಲೆ ಹಾಕಿದ್ದಾರೆ. 
ಆಮ್ ಆದ್ಮಿ ಪಕ್ಷದ ಯುವ ಮುಖಂಡರೊಬ್ಬರು ಕಾರನ್ನು ಬಳಸುತ್ತಿದ್ದಾಗ ಕಾರು ಕಳುವಾಗಿದೆ. ಕೇಜ್ರಿವಾಲ್ ಅವರಿಗೆ ಈ ಕಾರು ಬಳುವಳಿಯಾಗಿ ಬಂದಿತ್ತು. ಕೇಜ್ರಿವಾಲ್ ಕಾರು ಸೇರಿದಂತೆ ಈ ವರ್ಷದಲ್ಲಿ ದೆಹಲಿಯಲ್ಲಿ ಸರಿಸುಮಾರು 30,449 ವಾಹನಗಳು ಕಳವಾಗಿದೆ. 
ದೆಹಲಿ ಚುನಾವಣೆಗೂ ಮುನ್ನ ಕೇಜ್ರಿವಾಲ್ ಅವರು ಈ ಕಾರನ್ನು ಬಳಸುತ್ತಿದ್ದರು. ನಂತರ ದೆಹಲಿ ಮುಖ್ಯಮಂತ್ರಿಯಾದ ಬಳಿಕ ಈ ಕಾರನ್ನು ರಹಟಕ್ ಅಭ್ಯರ್ಥಿ ನವೀನ್ ಜೈಹಿಂದ್ ಗೆ ಪ್ರಚಾರಕ್ಕಾಗಿ ಈ ಕಾರನ್ನು ನೀಡಿದ್ದರು. 
SCROLL FOR NEXT