ಸಾಂದರ್ಭಿಕ ಚಿತ್ರ 
ದೇಶ

ಬ್ಲೂ ವೇಲ್ ಗೇಮ್ ನಿಂದ ರಕ್ಷಣೆ ಕೋರಿ ಮನವಿ ಸಲ್ಲಿಕೆ: ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಭಾರತ ಸೇರಿದಂತೆ ವಿಶ್ವಾದ್ಯಂತ ಹಲವು ಮಕ್ಕಳ ಆತ್ಮಹತ್ಯೆಗೆ ಕಾರಣವಾಗಿರುವ ಬ್ಲೂ ವೇಲ್ ನಂತಹ ಆಟಗಳು ಸಿಗದಂತೆ ಮಕ್ಕಳನ್ನು ರಕ್ಷಿಸಬೇಕೆಂದು ....

ನವದೆಹಲಿ: ಭಾರತ ಸೇರಿದಂತೆ ವಿಶ್ವಾದ್ಯಂತ ಹಲವು ಮಕ್ಕಳ ಆತ್ಮಹತ್ಯೆಗೆ ಕಾರಣವಾಗಿರುವ ಬ್ಲೂ ವೇಲ್ ನಂತಹ ಆಟಗಳು ಸಿಗದಂತೆ ಮಕ್ಕಳನ್ನು ರಕ್ಷಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ನ್ಯಾಯಪೀಠ ಈ ಕುರಿತು ಫೈರ್ ವಾಲ್ ರಚಿಸಲು ಸಮಿತಿಯೊಂದನ್ನು ರಚಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಅಕ್ರಮ ವಿಷಯಗಳು ಸಿಗುವುದನ್ನು ತಡೆಗಟ್ಟಲು ವಿನ್ಯಾಸಗೊಳಿಸಿದ ವ್ಯವಸ್ಥೆ ಅಥವಾ ಹೊರಹೋಗುವ ಅಥವಾ ಒಳಬರುವ ಅಂತರ್ಜಾಲ ಟ್ರಾಫಿಕ್ ನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಖಾಸಗಿ ಅಂತರ್ಜಾಲ ವ್ಯವಸ್ಥೆಯೇ ಫೈರ್ ವಾಲ್ ಆಗಿದೆ.
ಸುಪ್ರೀಂ ಕೋರ್ಟ್ ಈಗಾಗಲೇ, ಬ್ಲೂ ವೇಲ್ ಗೇಮ್ ನ್ನು ನಿಷೇಧಿಸಬೇಕೆಂದು ತಮಿಳು ನಾಡು ಮೂಲದ 73 ವರ್ಷದ ವಯೋವೃದ್ಧರು ಸಲ್ಲಿಸಿದ ಮನವಿಯ ವಿಚಾರಣೆ ನಡೆಸುತ್ತಿರುವುದರಿಂದ ಹೈಕೋರ್ಟ್ ಗಳು ಈ ಕುರಿತು ಮನವಿ ಪುರಸ್ಕರಿಸದಂತೆ ಕೂಡ ನ್ಯಾಯಮೂರ್ತಿಗಳಾದ ಎ.ಎಮ್.ಖನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ಬ್ಲೂ ವೇಲ್ ಗೇಮ್ ನ ಲಿಂಕ್ ನ್ನು ತೆಗೆದು ಹಾಕುವ ಸಂಬಂಧ ಸಲ್ಲಿಸಲಾಗಿದ್ದ ಮನವಿ ಕುರಿತು ಪ್ರತಿಕ್ರಿಯೆ ನೀಡುವಂತೆ ದೆಹಲಿ ಹೈಕೋರ್ಟ್ ಆಗಸ್ಟ್ 22ರಂದು ಫೇಸ್ ಬುಕ್, ಗೂಗಲ್ ಮತ್ತು ಯೂಹೂಗೆ ಸೂಚಿಸಿತ್ತು.
ಬ್ಲೂ ವೇಲ್ ಗೇಮ್ ನ ಪರಿಣಾಮದ ಗಂಭೀರತೆಯನ್ನು ಮನಗಂಡ ಮದ್ರಾಸ್ ಹೈಕೋರ್ಟ್ ಸೆಪ್ಟೆಂಬರ್ 4ರಂದು ಅದನ್ನು ನಿಷೇಧಿಸುವ ಸಾಧ್ಯತೆ ಕುರಿತು ಚಿಂತಿಸುವಂತೆ ಕೇಂದ್ರ ಮತ್ತು ತಮಿಳುನಾಡು ಸರ್ಕಾರಕ್ಕೆ ಸೂಚಿಸಿತ್ತು.
ಬ್ಲೂ ವೇಲ್ ಒಂದು ಆತ್ಮಹತ್ಯೆಗೆ ಪ್ರಚೋದಿಸುವ ಆಟವಾಗಿದ್ದು, ಇದರಲ್ಲಿ ಕೆಲವು ನಿಶ್ಚಿತ ಟಾಸ್ಕ್ ಗಳನ್ನು 50 ದಿನಗಳ ಒಳಗೆ ಪೂರೈಸಲು ನೀಡಲಾಗುತ್ತದೆ. ಅಂತಿಮ ಟಾಸ್ಕ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಅದು ಪ್ರಚೋದಿಸುತ್ತದೆ. ಪ್ರತಿ ಆಟದ ನಂತರ ಆಟಗಾರ ಫೋಟೋವನ್ನು ಹಂಚಿಕೊಳ್ಳಲು ಆದೇಶ ನೀಡಲಾಗುತ್ತದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT