ದೇಶ

ಅಯೋಧ್ಯೆಯಲ್ಲಿ ಮೆಗಾ ದೀಪಾವಳಿ 2017 ಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಯೋಜನೆ

Srinivas Rao BV
ಲಖನೌ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಈ ವರ್ಷ ದೀಪಾವಳಿಯನ್ನು ಅಯೋಧ್ಯೆಯಲ್ಲಿ ಆಚರಣೆ ಮಾಡಲಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಅಯೋಧ್ಯೆಯಲ್ಲಿ ದೀಪಾವಳಿ ಆಚರಣೆ ಮಾಡಿರುವುದಕ್ಕೂ ರಾಮಜನ್ಮಭೂಮಿ ವಿವಾದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. 
ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಬೆಂಬಲಿಗರೊಂದಿಗೆ ಅಯೋಧ್ಯೆಯಲ್ಲಿ ದೀಪಾವಳಿ ಆಚರಣೆ ಮಾಡಲಿದ್ದು, ಸಿದ್ಧತೆ ಭರದಿಂದ ಸಾಗಿದೆ. 2 ಲಕ್ಷ ದೀಪಗಳನ್ನು ಬೆಳಗುವ ಮೂಲಕ ದೀಪಾವಳಿ ಆಚರಣೆಯಲ್ಲಿ ಗಿನ್ನೀಸ್ ವಿಶ್ವ ದಾಖಲೆ ನಿರ್ಮಿಸಲು ಉದ್ದೇಶಿಸಲಾಗಿದೆ. ರಾಮಾಯಣಕ್ಕೆ 10,000 ವರ್ಷಗಳ ಇತಿಹಾಸವಿದ್ದು ಅಯೋಧ್ಯೆ ರಾಮಾಯಣದ ಅವಿಭಾಜ್ಯ ಅಂಗ, ಅಯೋಧ್ಯೆ ನಮ್ಮ ಸಂಸ್ಕೃತಿಯ ಹೆಮ್ಮೆ, ರಾಮ ನಮಗೆ ಆದರ್ಶ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 
SCROLL FOR NEXT