ವಿಜಯವಾಡ: ರೈಲಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ
21 ವರ್ಷದ ಗರ್ಭಿಣಿ ಚೆನ್ನೈಯಿಂದ ಗೋರಖ್ ಪುರಕ್ಕೆ ರಪ್ತಿಸಾಗರ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ...
ವಿಜಯವಾಡ: 21 ವರ್ಷದ ಗರ್ಭಿಣಿ ಚೆನ್ನೈಯಿಂದ ಗೋರಖ್ ಪುರಕ್ಕೆ ರಪ್ತಿಸಾಗರ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವಾಗ ಮಗುವಿಗೆ ಜನ್ಮ ನೀಡಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ರೈಲು ತೆನಾಲಿ ರೈಲು ನಿಲ್ದಾಣದಲ್ಲಿ ತುರ್ತು ನಿಲುಗಡೆ ಮಾಡಿದ್ದಾಗ ಜನ್ಮ ನೀಡಿದ ತಾಯಿ ಮತ್ತು ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ತನ್ನ ಅತ್ತೆ ಮತ್ತು ಇನ್ನೊಬ್ಬ ಸಂಬಂಧಿಯೊಂದಿಗೆ ಉತ್ತರ ಪ್ರದೇಶದ ಗೋರಖ್ ಪುರದಲ್ಲಿರುವ ತನ್ನ ಗ್ರಾಮಕ್ಕೆ ರೇಖಾ ಮರಳುತ್ತಿದ್ದಾಗ ರೈಲಿನಲ್ಲಿ ನೋವು ಕಾಣಿಸಿಕೊಂಡಿತು.
ಆಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬೇರೆ ಮಹಿಳೆಯರ ಸಹಾಯದಿಂದ ರೇಖಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಪ್ರಯಾಣಿಕರು ಟಿಸಿಗೆ ವಿಷಯ ತಿಳಿಸಿದರು. ಅವರು ರೈಲ್ವೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರು. ನಂತರ ರೈಲು ಗುಂಟೂರು ಜಿಲ್ಲೆಯ ತೆನಾಲಿ ರೈಲು ನಿಲ್ದಾಣದಲ್ಲಿ ತುರ್ತು ನಿಲುಗಡೆ ಮಾಡಿತು. ಇಲ್ಲದಿದ್ದರೆ ರೈಲು ಅಲ್ಲಿ ನಿಲ್ಲುವುದಿಲ್ಲ.
ರೈಲು ನಿಲ್ದಾಣಕ್ಕೆ ತಲುಪುವ ವೇಳೆ 108 ತುರ್ತು ವಾಹನವನ್ನು ಅಲ್ಲಿಗೆ ಕರೆಸಲಾಗಿತ್ತು.
ರೇಖಾ ಮತ್ತು ಆಕೆಯ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ತಾಯಿ ಮಗು ಆರೋಗ್ಯವಾಗಿದ್ದು ಸುರಕ್ಷಿತವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.