ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಸುಟ್ಟು ಕರಕಲಾಗಿರುವುದು
ಬಲಸೊರೆ(ಒಡಿಶಾ): ಪಟಾಕಿ ಘಟಕಗಳಲ್ಲಿ ನಡೆದ ಮೂರು ಪ್ರತ್ಯೇಕ ಸ್ಫೋಟಗಳಲ್ಲಿ ಕನಿಷ್ಟ ಇಬ್ಬರು ಅಪ್ರಾಪ್ತರು ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆ. ಬಲಸೊರೆಯೊಂದರಲ್ಲಿ ಒಂದರಲ್ಲಿಯೇ 8 ಮಂದಿ ಸಜೀವ ದಹನವಾಗಿದ್ದಾರೆ.ದೀಪಾವಳಿ ಸಂದರ್ಭದಲ್ಲಿ ಬಹಬಾಲ್ಪುರದಲ್ಲಿ ಅಕ್ರಮ ಪಟಾಕಿ ತಯಾರಿಕೆ ಘಟಕದಲ್ಲಿ ನಡೆದ ಸ್ಫೋಟದಲ್ಲಿ 12 ಮಂದಿ ಗಾಯಗೊಂಡಿದ್ದಾರೆ. ಪಿಪಿಲಿ ಮತ್ತು ರೂರ್ಕೆಲಾದಲ್ಲಿ ಮತ್ತೆರಡು ಘಟನೆಗಳು ನಡೆದಿವೆ.
ಬಲಸೊರೆಯಲ್ಲಿನ ದುರ್ಘಟನೆ ದೀಪಾವಳಿ ತಯಾರಿಯನ್ನು ಕುಗ್ಗಿಸಿತು. ಬಹವಾಲ್ಪುರ ಗ್ರಾಮದಲ್ಲಿ ಗೋಲಕ್ ಪ್ರಧಾನ್ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿದ್ದರಲ್ಲಿ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ. 9 ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಬಲಸೊರೆ ಜಿಲ್ಲಾ ಮುಖ್ಯ ಆಸ್ಪತ್ರೆಗೆ ಸೇರಿಸಲಾಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಟಾಕಿ ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಕೆಲವು ಕಾರ್ಮಿಕರು ಪಟಾಕಿಗಳನ್ನು ತಯಾರಿಸುವಾಗ ಈ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ.