ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿರುವ ಪಿಡಿಪಿ ಶಾಸಕ ಎಜಾಜ್ ಅಹ್ಮದ್ ಮಿರ್ ಅವರ ಮನೆ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ.
ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಉಗ್ರರ ಗುಂಪೊಂದು ಶಾಸಕನ ಮನೆ ಬಳಿ ಬಂದಿದೆ. ಈ ವೇಳೆ ಗ್ರೆನೇಡ್ ದಾಳಿ ನಡೆಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಘಟನೆ ವೇಳೆ ಶಾಸಕ ಮನೆಯಲ್ಲಿರಲಿಲ್ಲ. ಕುಟುಂಬ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವರದಿಗಳು ತಿಳಿಸಿವೆ.
ಗ್ರೆನೇಡ್ ದಾಳಿಯಲ್ಲಿ ಯಾವುದೇ ಸಾವು-ನೋವು, ನಷ್ಟಗಳು ಸಂಭವಿಸಿಲ್ಲ. ದಾಳಿ ಕುರಿತಂತೆ ಮಾಹಿತಿ ತಿಳಿದ ಕೂಡಲೇ ಅರೆಸೇನಾ ಪಡೆಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಭದ್ರತಾ ಪಡೆಗಳು ತೀವ್ರ ತಪಾಸಣೆಗಳನ್ನು ನಡೆಸಿತು. ಘಟನೆ ಕುರಿತಂತೆ ಈವರೆಗೂ ಯಾರೊಬ್ಬರನ್ನೂ ಬಂಧನಕ್ಕೊಳಪಡಿಸಿಲ್ಲ ಎಂದು ತಿಳಿದುಬಂದಿದೆ.
ಘಟನೆ ನಡೆದ ಸಂದರ್ಭದಲ್ಲಿ ನಾನು ಶ್ರೀನಗರದಲ್ಲಿದ್ದೆ. ನನ್ನ ಕುಟುಂಬ ಸದಸ್ಯರು ಮನೆಯಲ್ಲಿಯೇ ಇದ್ದರು, ಸ್ಫೋಟದಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ ಎಂದು ಶಾಸಕ ಎಜಾಜ್ ಆಹ್ಮದ್ ಮಿರ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics