ಒಡಿಶಾ: ನಕ್ಸಲರ ಅಟ್ಟಹಾಸ, ಮಾವೋವಾದಿಗಳಿಂದ ಲಾಂಚ್ ಚಾಲಕನ ಹತ್ಯೆ 
ದೇಶ

ಒಡಿಶಾ: ನಕ್ಸಲರ ಅಟ್ಟಹಾಸ, ಮಾವೋವಾದಿಗಳಿಂದ ಲಾಂಚ್ ಚಾಲಕನ ಹತ್ಯೆ

: ಮಾವೋವಾದಿ ನಕ್ಸಲರು ಒಡಿಶಾದ ಚಿತ್ರಕುಂಡ ಜಲಾಶಯದ ಬಳಿ ಸ್ಥಳೀಯರ ಸಮ್ಮುಖದಲ್ಲಿಯೇ ಇಂದು 45ರ ಹರೆಯದ ಲಾಂಚ್ ಚಾಲಕನನ್ನು ಗುಂಡಿಟ್ಟು ಕೊಂದಿದ್ದಾರೆ.

ಮಾಲ್ಕಂಗಿರಿ: ಮಾವೋವಾದಿ ನಕ್ಸಲರು ಒಡಿಶಾದ ಚಿತ್ರಕುಂಡ ಜಲಾಶಯದ ಬಳಿ ಸ್ಥಳೀಯರ ಸಮ್ಮುಖದಲ್ಲಿಯೇ ಇಂದು 45ರ ಹರೆಯದ ಲಾಂಚ್ ಚಾಲಕನನ್ನು ಗುಂಡಿಟ್ಟು ಕೊಂದಿದ್ದಾರೆ. ಈ ಮುಖೇನ ಭದ್ರತಾ ಪಡೆಗಳಿಗೆ ಗಂಭೀರ ಸವಾಲನ್ನು ಒಡ್ಡಿದ್ದಾರೆ.
ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್) ಗೆ ಎಚ್ಚರಿಕೆ ನೀಡುವ ಸಲುವಾಗಿ ಲಾಂಚ್ ನ ಚಾಲಕ ಸಾಮ್ ಪಾಂಗಿ ಅವರ ಹತ್ಯೆ ನಡೆದಿದೆ ಎನ್ನಲಾಗಿದ್ದು ಹತ್ಯೆ ನಡೆಸಿದ ಮಾವೋವಾದಿಗಳು ಲಾಂಚ್ ನೊಂದಿಗೆ ಪರಾರಿಯಾಗಿದ್ದಾರೆ. ಸುಮಾರು ಹನ್ನೆರಡಕ್ಕೂ ಹೆಚ್ಚು ಅಂಗಡಿಗಳಿದ್ದ ಚಿತ್ರಕುಂದದ ಸ್ಪಿಲ್ ವೇ ಲಾಂಚ್ ಗಾಟ್ ನಲ್ಲಿ ಈ ಘಟನೆ ನಡೆದಿದೆ.
ಎಂಟು ಮಂದಿ ಮಾವೋವಾದಿಗಳು ಹಡಗಿನಲ್ಲಿ ಬಂದಿದ್ದು, ಅವರಲ್ಲಿ ಇಬ್ಬರು ಕೆಲಗಿಳಿದು ಪಾಂಗಿ ಅವರನ್ನು ಕೊಂದು ಹಾಕಿದ್ದಾರೆ. ಆ ಬಳಿಕ ಭದ್ರತಾ ಪಡೆಗಳಿಗೆ ಎಚ್ಚರಿಕೆಯನ್ನು ನೀಡಿ ಲಾಂಚ್ ನ್ನು ತೆಗೆದುಕೊಂಡ ಆ ಇಬ್ಬರನ್ನು ಉಳಿದ ಮತ್ತು ಆರು ಮಂದಿ ತಮ್ಮ ದೋಣಿಯಲ್ಲಿ ಹಿಂಬಾಲಿಸಿದರು.
ಸಿಪಿಐ (ಮಾವೋವಾದಿ) ಕೋರಪುಟ್ ಮುಖ್ಯಸ್ಥ ಉದಯ್ ಈ ಹತ್ಯೆಯ ರೂವಾರಿಗಳೆಂದು ಎಂದು ಮೂಲಗಳು ತಿಳಿಸಿವೆ.
ಪಾಂಗಿ ಅವರು ಪೋಲಿಸ್ ಮಾಹಿತಿದಾರರೆಂದು ತಿಳಿದ ಮಾವೋವಾದಿಗಳು ಅವರನ್ನು ಹತ್ಯೆ ಮಾಡಿದ್ದಾರೆ. ಒಡಿಶಾದ ಈ ಭಾಗಗಳಲ್ಲಿ ಮಾವೋವಾದಿಗಳು ಜಲಮಾರ್ಗದ ಮೂಲಕ ದಾಳಿ ನದೆಸುತ್ತಿರುವುದು ಬಿಎಸ್ ಎಫ್  ಗೆ ಬಹುದೊಡ್ದ ಸವಾಲಾಗಿದೆ. ಅ.16 ರಂದು ಮಾವೋವಾದಿಗಳು ಕೋಟಾಗೋಡಾ ಘಾಟ್ ಬಳಿ ಎರಡು ಬೋಟ್ ಗಳನ್ನು ಲೂಟಿ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅನಕ್ಷರಸ್ಥ' ಪ್ರಧಾನಿಯಿಂದಾಗಿ ಪೆಟ್ರೋಲ್-ಡೀಸೆಲ್ ಮತ್ತು ಅನಿಲ ಬೆಲೆಗಳು ಹೆಚ್ಚಳವಾಗಿದೆ: ಸಿಎಂ ಸಿದ್ದರಾಮಯ್ಯ

IPL Valuation Chart: 1.63 ಲಕ್ಷ ಕೋಟಿಗೇರಿದ ಐಪಿಎಲ್ ಮೌಲ್ಯ, CSK ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ KKR, 'ಕಿಂಗ್' ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು ಗೊತ್ತಾ?

ಮಾರ್ತಾಂಡ ಆನೆ ಕೊಂದ ಕಂಜನ್ ದಸರಾದಿಂದ ಶಾಶ್ವತ ನಿಷೇಧ: ಸಚಿವ ಈಶ್ವರ್ ಖಂಡ್ರೆ ಆದೇಶ

ಬೋಗಸ್ ದಾಖಲೆ ಸೃಷ್ಟಿಸಿ 23 ಕೋಟಿ ರೂ ಲೂಟಿ; ಬೆಳಗಾವಿ ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿದ 8 ಕಡೆ ಲೋಕಾಯುಕ್ತ ದಾಳಿ!

ವಚನಾನಂದಶ್ರೀ ವಿರುದ್ಧದ Pocso ಪ್ರಕರಣ: ತನಿಖಾಧಿಕಾರಿ PSI ಮಂಜುಳಾ ದಿಢೀರ್ ವರ್ಗಾವಣೆ!

SCROLL FOR NEXT