ಲಖನೌ: ಅ.26 ರಂದು ವಿಶ್ವವಿಖ್ಯಾತ ತಾಜ್ ಮಹಲ್ ಗೆ ಭೇಟಿ ನೀಡಲಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಷಾ ಜಹಾನ್ ಹಾಗೂ ಮುಮ್ತಾಜ್ ಸಮಾಧಿ ಬಳಿ 30 ನಿಮಿಷ ಇರಲಿದ್ದಾರೆ.
ತಾಜ್ ಮಹಲ್ ಒಳಗೆ ಎಲ್ಲಾ ಪ್ರದೇಶಗಳಿಗೂ ಯೋಗಿ ಆದಿತ್ಯನಾಥ್ ಹೋಗಲಿದ್ದಾರೆ ಎಂದು ಉತ್ತರ ಪ್ರದೇಶದ ಪ್ರವಾಸೋದ್ಯಮ ಕಾರ್ಯದರ್ಶಿಗಳು ತಿಳಿಸಿದ್ದಾರೆ. ತಾಜ್ ಮಹಲ್ ಗೆ ಭೇಟಿ ನೀಡುತ್ತಿರುವ ಮೊದಲ ಬಿಜೆಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಿದ್ದಾರೆ.
ಇದೇ ವೇಳೆ ಯಮುನಾ ನದಿಯಿಂದ ತಾಜ್ ಮಹಲ್ ವಾರೆಗೂ ನಿರ್ಮಿಸಲು ಉದ್ದೇಶಿಸಲಾಗಿರುವ ಕಾರಿಡಾರ್ ಗಾಗಿ ಗುರುತಿಸಲಾಗಿರುವ ಪ್ರದೇಶವನ್ನೂ ಸಹ ಯೋಗಿ ಆದಿತ್ಯನಾಥ್ ಪರಿಶೀಲನೆ ನಡೆಸಲಿದ್ದಾರೆ. ತಾಜ್ ಮಹಲ್ ಕುರಿತಂತೆ ಇತ್ತೀಚಿನ ದಿನಗಳಲ್ಲಿ ಹಲವು ವಿವಾದಾತ್ಮಕ ಹೇಳಿಕೆಗಳು ಬಂದಿದ್ದು, ಈ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ತಾಜ್ ಗೆ ಭೇಟಿ ನೀಡುತ್ತಿರುವುದು ಮಹತ್ವ ಪಡೆದುಕೊಂಡಿದೆ.