ನವದೆಹಲಿ: ಬಿಲ್ಕಿಸ್ ಬಾನೊ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಬಾಗಿಯಾಗಿದ್ದ ಪೋಲೀಸ್ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಜರುಗಿಸಲಾಗಿದೆ ಎನ್ನುವುದನ್ನು ನಾಲ್ಕು ವಾರದಲ್ಲಿ ತಿಳಿಸುವಂತೆ ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಡಿ. ವೈ. ಚಂದ್ರಚೂಡ ರನ್ನು ಒಳಗೊಂಡ ಪೀಠವು 2002 ರ ಗುಜರಾತ್ ಗಲಭೆಯಲ್ಲಿ ಸಂಭವಿಸಿದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿ ಆಕೆಗೆ ನೀಡಲಾದ ಪರಿಹಾರದ ವರ್ಧನೆಗೆ ಕೋರಿತು.
ಗಲಭೆಯಲ್ಲಿ ಬದುಕುಳಿದವರು ಸಾಕಷ್ಟು ಪರಿಹಾರ ಮತ್ತು ಪೋಲಿಸ್ ಅಧಿಕಾರಿಗಳ ವಿರುದ್ಧ ಇಲಾಖೆಯ ಕ್ರಮವನ್ನು ಪ್ರಾರಂಭಿಸಲು ಕೇಳಿದ್ದಾರೆ. ಇಲಾಖೆಯ ಕ್ರಮದ ಬಗ್ಗೆ ನಾಲ್ಕು ವಾರಗಳಲ್ಲಿ ಗುಜರಾತ್ ಸರ್ಕಾರದಿಂದ ವರದಿಯನ್ನು ಕೇಳಿದ ಸುಪ್ರೀಂ ಕೋರ್ಟ್, ದೌರ್ಜನ್ಯದಲ್ಲಿ ಬದುಕುಳಿದವರಿಗೆ ಪರಿಹಾರ ನೀಡುವ ಬಗ್ಗೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪ್ರತ್ಯೇಕ ಮನವಿಯನ್ನು ಸಲ್ಲಿಸುವಂತೆ ಸಲಹೆ ನೀಡಿತು.
ಇದೇ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಮೇ 4 ರಂದು 12 ಜನರಿಗೆ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಪೊಲೀಸರು ಮತ್ತು ವೈದ್ಯರು ಸೇರಿದಂತೆ ಏಳು ಜನರನ್ನು ತಪ್ಪಿತಸ್ಥರೆಂದು ತೀರ್ಮಾನಿಸಲಾಗಿತ್ತು.
ಬಿಲ್ಕಿಸ್ ಬಾನೊ ಮಾರ್ಚ್ 2002, ರಲ್ಲಿ ಸಂಭವಿಸಿದ್ದ ಗೋಧ್ರಾ ರೈಲು ದುರಂತದ ಘಟನೆಯಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದರು. ಇದಲ್ಲದೆ ಗರ್ಭಿಣಿಯಾಗಿದ್ದ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು.