ದೇಶ

ವಿಶಾಖಪಟ್ಟಣಂ: ಫುಟ್ ಪಾಥ್ ನಲ್ಲಿ ಹಾಡಹಗಲೇ ಮಹಿಳೆಯ ಮೇಲೆ ಅತ್ಯಾಚಾರ!

35 ವರ್ಷದ ಮಹಿಳೆಯ ಮೇಲೆ ಲಾರಿ ಚಾಲಕನೊಬ್ಬ ಫುಟ್ ಪಾಥ್ ನಲ್ಲಿ ಅತ್ಯಾಚಾರವೆಸಗಿರುವ ಘಟನೆ ವಿಶಾಖಪಟ್ಟಣಂ ನ ರೈಲ್ವೆ ಕಾಲೋನಿಯ ಶ್ರೀನಿವಾಸ ಕಲ್ಯಾಣ ಮಂಟಪದ ಬಳಿ ನಡೆದಿದೆ.

ವಿಶಾಖಪಟ್ಟಣಂ: 35 ವರ್ಷದ ಮಹಿಳೆಯ ಮೇಲೆ ಲಾರಿ ಚಾಲಕನೊಬ್ಬ ಫುಟ್ ಪಾಥ್ ನಲ್ಲಿ ಅತ್ಯಾಚಾರವೆಸಗಿರುವ ಘಟನೆ ವಿಶಾಖಪಟ್ಟಣಂ ನ ರೈಲ್ವೆ ಕಾಲೋನಿಯ ಶ್ರೀನಿವಾಸ ಕಲ್ಯಾಣ ಮಂಟಪದ ಬಳಿ ನಡೆದಿದೆ. 
ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತಿದ್ದರೂ ಸಹ ಅಲ್ಲಿದ್ದವರು ಯಾರೂ ರಕ್ಷಣೆಗೆ ಧಾವಿಸದೇ ವಿಡಿಯೋ ಚಿತ್ರೀಕರಿಸುವಲ್ಲಿ ನಿರತರಾಗಿದ್ದರು. ಅ.22 ರಂದು ಮಧ್ಯಾಹ್ನ 2 ಗಂಟೆಗೆ ಈ ಘಟನೆ ನಡೆದಿದ್ದು, ಆಟೋ ಚಾಲಕನೊಬ್ಬ ವಿಡಿಯೋ ಚಿತ್ರೀಕರಿಸಿದ್ದಾನೆ. ಅಷ್ಟೇ ಅಲ್ಲದೇ ವಿಡಿಯೋವನ್ನು ವಿಶಾಖಪಟ್ಟಣಂ ನ ಪೊಲೀಸ್ ಠಾಣೆಯ ವಾಟ್ಸ್ ಆಪ್ ಖಾತೆಗೆ ಕಳಿಸಿದ್ದಾನೆ. 
ಗಂಜಿ ಶಿವ (25) ಎಂಬ ವ್ಯಕ್ತಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವವನಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆಗೆ ಆತ ಪರಾರಿಯಾಗಿದ್ದಾನೆ. ಆಟೋ ಚಾಲಕ ಹಾಗೂ ಸ್ಥಳೀಯರು ನೀಡಿರುವ ಮಾಹಿತಿಯನ್ನಾಧರಿಸಿ ನಂತರ ಆತನನ್ನು ಬಂಧಿಸಲಾಗಿದ್ದು, ಕೃತ್ಯ ಎಸಗುವಾಗ ಆತ ಪಾನಮತ್ತನಾಗಿದ್ದ ಎಂದು ತಿಳಿದುಬಂದಿದೆ. ಅತ್ಯಾಚಾರಕ್ಕೊಳಗಾದ ಮಹಿಳೆ ಅನಾಥೆಯಾಗಿದ್ದು, ಫುಟ್ ಪಾಥ್ ನಲ್ಲೇ ಭಿಕ್ಷೆ ಬೇಡುತ್ತಿದ್ದರು ಎಂದು ತಿಳಿದುಬಂದಿದೆ. ಸಂತ್ರಸ್ತೆಯನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೌಕಾಪಡೆ ಭದ್ರತೆಯಲ್ಲಿ Hormuz ಜಲಸಂಧಿ ದಾಟಿದ ಭಾರತ ಮೂಲದ LPG tanker!

ಒಂದು ರೂಪಾಯಿಗೆ ಒಂದು ಲೀಟರ್ ಹಾಲು!: ಬಮುಲ್ ಅಧ್ಯಕ್ಷ DK Suresh ಹೇಳಿದ್ದೇನು?

IPL 2026: ಪಂದ್ಯಾವಳಿಗೂ ಮುನ್ನವೇ RCB ಹೀನಾಯ ದಾಖಲೆ ತೋರಿಸಿ ಕೆಣಕಿದ KKR; ಕೆರಳಿದ ಆರ್​ಸಿಬಿ ಅಭಿಮಾನಿಗಳು, Video!

ಮದುವೆ ರದ್ದಾದ ನಂತರ ತನ್ನ ರಕ್ತವನ್ನೇ ಯುವತಿಗೆ ಇಂಜೆಕ್ಟ್ ಮಾಡಿದ HIV ಸೋಂಕಿತ ಯುವಕನ ಬಂಧನ!

ಮುಸ್ಲಿಂ ಯುವತಿಯೊಂದಿಗೆ ಲವ್, ಮದುವೆ ಬೇಡ ಅಂದಿದ್ದಕ್ಕೆ 84 ಬಾರಿ ಇರಿದು ಸಹೋದರಿಯ ಕೊಲೆ: ಅಮ್ಮನಿಗೆ "ಸರ್ಪ್ರೈಸ್" ಎಂದ ಇಂಜಿನಿಯರ್!

SCROLL FOR NEXT