ಮುಂಬೈ: ಬಿಜೆಪಿ ನೇತೃತ್ವದ ಎನ್ ಡಿಎ ಮಿತ್ರ ಪಕ್ಷ ಶಿವಸೇನೆ ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದು, ಒಂದು ಪಕ್ಷದ ಬಳಿ ಅನಿಯಮಿತ ಹಣ ಇದೆ ಎಂದು ಆರೋಪಿಸಿದೆ.
ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆದಿರುವ ಶಿವಸೇನೆ, ನೋಟು ನಿಷೇಧದಿಂದ ಜನತೆ ಸಾಕಷ್ಟು ಸಂಕಷ್ಟ ಎದುರಿಸಿದ್ದರೂ ಒಂದು ಪಕ್ಷದ ಬಳಿ ಅಪಾರ ಪ್ರಮಾಣದ ಹಣ ಇದ್ದು, ಗೋವಾ, ಮಣಿಪುರಗಳಲ್ಲಿ ಜನತೆಯಿಂದ ತಿರಸ್ಕರಿಸಲ್ಪಟ್ಟಿದ್ದರೂ ಸಹ ಸರ್ಕಾರವನ್ನು ರಚಿಸಿದೆ ಎಂದಿದೆ.
ಶಿವಸೇನೆಯನ್ನು ನಿರ್ನಾಮಗೊಳಿಸಲೂ ಸಹ ಹಣವನ್ನು ಬಳಕೆ ಮಾಡಲಾಗುತ್ತಿದೆ ಎಂದು ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಆರೋಪಿಸಿದೆ.