ಮಧ್ಯಪ್ರದೇಶ: ಬಿಜೆಪಿ ನಾಯಕನೋರ್ವ ಬಯಲು ಶೌಚಕ್ಕೆ ತೆರಳಿದ್ದ ಮಹಿಳೆಯ ಫೋಟೋ ಕ್ಲಿಕ್ಕಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಎಎನ್ಐ ಮಾಹಿತಿಯ ಪ್ರಕಾರ ಗುನ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ನೀಚ ಕೃತ್ಯ ಎಸಗಿದ ವ್ಯಕ್ತಿಯನ್ನು ಬಿಜೆಪಿಯ ವಿಭಾಗೀಯ ಅಧ್ಯಕ್ಷ ಪ್ರದೀಪ್ ಭಟ್ ಎಂದು ಗುರುತಿಸಲಾಗಿದೆ. ಮಹಿಳೆ ದಾಖಲಿಸಿರುವ ದೂರಿನ ಪ್ರಕಾರ, ಬಹಿರ್ದೆಸೆಗೆ ಹೋಗಿದ್ದಾಗ ತನ್ನ ಫೋಟೋ ತೆಗೆದಿದ್ದ ಪ್ರದೀಪ್ ಭಟ್ ಆಕೆಗೆ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ಮಹಿಳೆ ನೀಡಿರುವ ದೂರಿನ ಅನ್ವಯ ಪ್ರದೀಪ್ ವಿರುದ್ಧ ಸೆಕ್ಷನ್ 354ಸಿ ಹಾಗೂ 294 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.