ನವದೆಹಲಿ: ಕೇಂದ್ರ ಸರ್ಕಾರ ಬ್ಯಾಂಕ್ ಮರು ಬಂಡವಳೀಕರಣಕ್ಕೆ 2.11 ಲಕ್ಷ ಕೋಟಿ ರೂ.ಗಳನ್ನು ಒದಗಿಸುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ದೇಶದಲ್ಲಿ 5-7 ದೊಡ್ಡ ಬ್ಯಾಂಕ್ ಗಳಿರಬೇಕು ಎಂದು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣಿಯನ್ ಅಭಿಪ್ರಾಯಪಟ್ಟಿದ್ದಾರೆ.
ನಾಳಿನ ಆದರ್ಶವಾಗಿರುವ ಬ್ಯಾಂಕಿಂಗ್ ಪ್ರಪಂಚದಲ್ಲಿ ಭಾರತದಲ್ಲಿ ದೇಶದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿರುವ ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಇರಬೇಕಾಗುತ್ತವೆ ಎಂದು ಎಸ್ ಜಿಟಿಬಿ ಖಲ್ಸಾ ಕಾಲೇಜ್ ನಲ್ಲಿ ಉಪನ್ಯಾಸ ನೀಡಿರುವ ಅರವಿಂದ್ ಸುಬ್ರಹ್ಮಣಿಯನ್ ಹೇಳಿದ್ದಾರೆ.
ಚೀನಾದ ಉದಾಹರಣೆಯನ್ನು ನೀಡಿರುವ ಅರವಿಂದ್ ಸುಬ್ರಹ್ಮಣಿಯನ್ ಇಡೀ ವಿಶ್ವದಲ್ಲಿ ಅತಿ ದೊಡ್ಡ ಬ್ಯಾಂಕ್ ಗಳ ಪೈಕಿ 4 ಬ್ಯಾಂಕ್ ಗಳಿವೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಖಾಸಗಿ ಕ್ಷೇತ್ರದ ಬ್ಯಾಂಕ್ ಗಳು ಹೆಚ್ಚಬೇಕೆ ಎಂಬುದು ನಮ್ಮ ಮುಂದಿರುವ ದೊಡ್ಡ ಪ್ರಶ್ನೆಯಾಗಿದ್ದು, ಮುಂದಿನ 5-10 ವರ್ಷಗಳಿಗೆ ಭಾರತಕ್ಕೆ ಸಂಬಂಧಿಸಿದ ಬ್ಯಾಂಕಿಂಗ್ ಕ್ಷೇತ್ರಕ್ಕೆ 5-7 ಬ್ಯಾಂಕ್ ಗಳಿರುವುದು ಅತ್ಯುತ್ತಮವಾದುದ್ದು ಎಂದು ಅರವಿಂದ್ ಸುಬ್ರಹ್ಮಣಿಯನ್ ಅಭಿಪ್ರಾಯಪಟ್ಟಿದ್ದಾರೆ.