ನವದೆಹಲಿ: ವಿವಾದಿತ ಇಸ್ಲಾಂ ಧರ್ಮ ಪ್ರವಚನಕಾರ ಜಾಕೀರ್ ನಾಯಕ್ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಜಾರ್ಜ್‌ಶೀಟ್ ದಾಖಲಿಸಿದೆ.
ಪ್ರಕರಣದ ನಂತರ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜಾಕೀರ್ ನಾಯಕ್ ವಿರುದ್ಧ ದ್ವೇಷದ ಭಾಷಣ ಮತ್ತು ಭಯೋತ್ಪಾದನೆಗೆ ಉತ್ತೇಜನೆ ಆರೋಪದ ಮೇಲೆ ಎನ್ಐಎ ಚಾರ್ಜ್ ಶೀಟ್ ದಾಖಲಿಸಿದೆ.
ಐಪಿಸಿ ಸೆಕ್ಷನ್ 120-ಬಿ ದೇಶದ ವಿರುದ್ಧ ಯುದ್ಧ ನಡೆಸುವುದಕ್ಕಾಗಿ ಪ್ರೇರಣೆ, 295-ಎ ಅಡಿಯಲ್ಲಿ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳಿಗಾಗಿ, 298ರ ಅಡಿಯಲ್ಲಿ ಧಾರ್ಮಿಕ ಭಾವನೆಗಳನ್ನು ಗಂಭೀರಗೊಳಿಸಬೇಕೆಂದು ಉದ್ದೇಶ. ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳನ್ನು ಗಾಯಗೊಳಿಸಬೇಕೆಂಬ ಉದ್ದೇಶಪೂರ್ವಕ ಭಾಷಣಗಳು 10,13,18 ಹಾಗೂ 10,13 ಮತ್ತು 20ನೇ ಅಡಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು(ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಜಾಕೀರ್ ನಾಯಕ್ ವಿರುದ್ಧ ಎನ್ಐಎ ಪ್ರಕರಣ ದಾಖಲಿಸಿದೆ.
ಇನ್ನು 51 ವರ್ಷದ ಜಾಕೀರ್ ನಾಯಕ್ ವಿರುದ್ಧ ಭಯೋತ್ಪಾದನೆ ಮತ್ತು ಮನಿ ಲ್ಯಾಂಡ್ರಿಂಗ್ ಆರೋಪಗಳ ಅಡಿಯಲ್ಲಿ ಎನ್ಐಎ ತನಿಖೆ ನಡೆಸುತ್ತಿದೆ.
ಬಾಂಗ್ಲಾದೇಶದಲ್ಲಿ ಉಗ್ರ ದಾಳಿ ನಡೆಸಿದ್ದ ಭಯೋತ್ಪಾದಕರು ತಾವು ದಾಳಿ ನಡೆಸಲು ಧಾರ್ಮಿಕ ಪ್ರವಚನಕಾರ ಜಾಕೀರ್ ನಾಯಕ್ ಅವರ ಭಾಷಣೆಗಳೇ ಪ್ರೇರಣೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ 2016ರಲ್ಲಿ ಜಾಕೀರ್ ನಾಯಕ್ ವಿರುದ್ಧ ಎನ್ಐಎ ತನಿಖೆ ಕೈಗೊಂಡಿತ್ತು.