ಹಿರಿಯ ಪತ್ರಕರ್ತ ಕೆ.ಜೆ ಸಿಂಗ್ ಹಾಗೂ ಅವರ ತಾಯಿ ಗುರುಚರಣ್ ಕೌರ್ 
ದೇಶ

ಪತ್ರಕರ್ತ ಕೆ.ಜೆ. ಸಿಂಗ್, ತಾಯಿಯ ಹತ್ಯೆ ಪ್ರಕರಣ: ಯುವಕ ಬಂಧನ

ಹಿರಿಯ ಪತ್ರಕರ್ತ ಕೆ.ಜೆ ಸಿಂಗ್ ಹಾಗೂ ಅವರ ತಾಯಿ 92 ವರ್ಷದ ಗುರುಚರಣ್ ಕೌರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ರಾಜ್ಯ ಪೊಲೀಸರು ಯುವಕನೊಬ್ಬನನ್ನು...

ಚಂಡೀಗಢ: ಹಿರಿಯ ಪತ್ರಕರ್ತ ಕೆ.ಜೆ ಸಿಂಗ್ ಹಾಗೂ ಅವರ ತಾಯಿ 92 ವರ್ಷದ ಗುರುಚರಣ್ ಕೌರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ರಾಜ್ಯ ಪೊಲೀಸರು ಯುವಕನೊಬ್ಬನನ್ನು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ. 
ಗೌರವ್ ಕುಮಾರ್ (27) ಬಂಧಿತ ಆರೋಪಿಯಾಗಿದ್ದಾನೆ. ಸಿಂಗ್ ಅವರ ಹತ್ಯೆಗೂ ಮುನ್ನು ಅವರ ಮನೆಯ ಹತ್ತಿರದಲ್ಲೇ ಇದ್ದ ಉದ್ಯಾನವನದಲ್ಲಿ ವ್ಯಕ್ತಿಯೊಬ್ಬ ಕುಳಿತಿಕೊಂಡಿದ್ದ. ಈ ವೇಳೆ ಸಿಂಗ್ ಅವರ ಮನೆಯತ್ತಲೇ ಗಮನಿಸುತ್ತಿದ್ದ . ಬಳಿಕ ಇದನ್ನು ಗಮನಿಸಿದ ಸಿಂಗ್ ಅವರು ವ್ಯಕ್ತಿಯನ್ನು ಮಾತನಾಡಿದ್ದಾರೆ. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ವ್ಯಕ್ತಿಗೆ ಸಿಂಗ್ ಕಪಾಳಕ್ಕೆ ಹೊಡೆದು, ಸ್ಥಳವನ್ನು ತೊರೆಯುವಂತೆ ತಿಳಿಸಿದ್ದಾರೆ. ಬಳಿಕ ಗೌರವ್ ಸ್ಥಳದಿಂದ ಹೊರಟು ಹೋಗಿದ್ದಾನೆ. ಬಳಿಕ ಮತ್ತೆ ಸ್ಥಳಕ್ಕೆ ಬಂದು ಸಿಂಗ್ ಹಾಗೂ ಅವರ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆಂದು ಪೊಲೀಸ್ ಅಧಿಕಾರಿ ಕುಲ್ದೀಪ್ ಸಿಂಗ್ ಛಹಲ್ ಅವರು ಹೇಳಿದ್ದಾರೆ. 
ಸಿಂಗ್ ಅವರ ಹತ್ಯೆಗೆ ಬಳಸಲಾಗಿದ್ದ ಚೂರಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೆ, ಸಿಂಗ್ ಮನೆಯಲ್ಲಿ ಕಳ್ಳತನವಾಗಿದ್ದ ಕಾರು, ದಾಖಲೆಗಳು, ಮೊಬೈಲ್ ಫೋನ್, ಕೈ ಗಡಿಯಾರ ಹಾಗೂ ಡಿವಿಆರ್ ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಹತ್ಯೆಯಾದ ಕೆ.ಜೆ. ಸಿಂಗ್ ಅವರ ಕಾರನ್ನು ವ್ಯಕ್ತಿಯೊಬ್ಬ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಚಾಲನೆ ಮಾಡುತ್ತಿರುವುದು ಕಂಡು ಬಂದಿತ್ತು. ಸಿಂಗ್ ಅವರ ಹತ್ಯೆಯಾದ ಬಳಿಕ ಅವರ ಕಾರು ಕಳ್ಳತನವಾಗಿತ್ತು. ಬುಧವಾರ ವ್ಯಕ್ತಿಯೊಬ್ಬ ಕಾರೊಂದನ್ನು ನಕಲಿ ನಂಬರ್ ಪ್ಲೇಟ್ ನೊಂದಿಗೆ ಚಾಲನೆ ಮಾಡುತ್ತಿದ್ದನ್ನು ಕಂಡ ಪೊಲೀಸರು ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದರು. 
ಕೆಲ ದಿನಗಳ ಹಿಂದಷ್ಟೇ ಸಿಂಗ್ ಅವರ ಮನೆಯೊಳಗೆ ನುಗ್ಗಿದ್ದ ದುಷ್ಕರ್ಮಿಗಳ ಗುಂಪೊಂದು ಪತ್ರಕರ್ತ ಕೆ.ಜೆ. ಸಿಂಗ್ ಅವರ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿತ್ತು. ಇದೇ ವೇಳೆ ಮನೆಯಲ್ಲಿದ್ದ ಸಿಂಗ್ ಅವರ ತಾಯಿ ಗುರುಚರಣ್ ಕೌರ್ ಅವರ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

'ನನ್ನ ಚೋಲಿ ಬಗ್ಗೆ 6 ಜನರಿಂದ ಪ್ಯಾನಲ್ ಡಿಸ್ಕಷನ್, ಸಂಸ್ಕೃತಿ ಬಟ್ಟೆಯಲ್ಲ, ಹೃದಯದಲ್ಲಿದೆ'; ರಾಖಿ ಜಾಹೀರಾತು ವಿವಾದ ಬಗ್ಗೆ ಮೌನ ಮುರಿದ ನಟಿ Kriti Sanon

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ಹಣದುಬ್ಬರ ಶೇ.5.2; ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್? ಆಹಾರ, ಇಂಧನ ಬೆಲೆ ಏರಿಕೆ!