ದೇಶ

ಜಮ್ಮು-ಕಾಶ್ಮೀರ ಪೊಲೀಸ್ ಕೈಯಲ್ಲಿ ಎಕೆ 47: ವೈರಲ್ ಆದ ಫೋಟೋ, ಎಲ್ಇಟಿ ಸೇರಿರುವ ಶಂಕೆ

Manjula VN
ಜಮ್ಮು: ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಒಬ್ಬ ಕೈಯಲ್ಲಿ ಎಕೆ 47 ಹಿಡಿದಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿರಬಹುದು ಎಂಬ ಶಂಕೆಗಳು ಮೂಡತೊಡಗಿವೆ. 
ಶೋಪಿಯಾನ್ ಜಿಲ್ಲೆಯ ಹೆಫ್ ಗ್ರಾಮದ ನಿವಾಸಿಯಾಗಿರುವ ಇಶ್ಫಕ್ ಅಹ್ಮದ್ ದಾರ್ ಜಮ್ಮು ಮತ್ತು ಕಾಶ್ಮೀರದ ಕತುವಾ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮನೆಗೆ ತೆರಳುವ ಸಲುವಾಗಿ ಕೆಲ ದಿನಗಳ ಹಿಂದೆ ರಜೆ ತೆಗೆದುಕೊಂಡಿದ್ದ ಅಹ್ಮದ್ ಅವರು ಬಳಿಕ ನಾಪತ್ತೆಯಾಗಿದ್ದರು. ಬಳಿಕ ಕುಟುಂಬ ಸದಸ್ಯರು ದೂರು ದಾಖಲಿಸಿದ್ದರು. 
ಅಹ್ಮದ್ ಅವರು ಎಕೆ 47 ಹಿಡಿದುಕೊಂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಫೋಟೋ ವೈರಲ್ ಆಗಿದೆ. ಅಲ್ಲದೆ, ಅಹ್ಮದ್ ದಾರ್ ಅವರು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಸೇರಿರಬಹುದು ಎಂಬ ಶಂಕೆಗಳು ಮೂಡತೊಡಗಿವೆ. 
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿ ಮುನೀರ್ ಅಹ್ಮದ್ ಖಾನ್ ಅವರು, ಅಹ್ಮದ್ ದಾರ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿರುವುದನ್ನು ದೃಢಪಡಿಸುತ್ತವೆ. ಆದರೆ, ಯಾವ ಸಂಘಟನೆಗೆ ಸೇರ್ಪಡೆಗೊಂಡಿದ್ದಾರೆಂಬುದನ್ನು ಖಚಿತಗೊಂಡಿಲ್ಲ. ಪ್ರಸ್ತುತ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. 
SCROLL FOR NEXT