ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಜಿಎಸ್ ಟಿಯಲ್ಲಿನ ದೋಷಗಳಿಂದ ಉದ್ಯೋಗ, ಉದ್ಯಮಿಗಳಿಗೆ ಹೊಡೆತ: ಮನಮೋಹನ್ ಸಿಂಗ್

ಜಿಎಸ್ ಟಿಯಲ್ಲಿ ದೋಷಪೂರಿತ ರಚನೆಗಳು ಉದ್ಯೋಗ ಹಾಗೂ ಉದ್ಯಮಿಗಳಿಗೆ ಭಾರಿ ಹೊಡೆತ ನೀಡಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್
Srinivas Rao BV
Updated On : 30 Oct 2017, 7:21 am
ನವದೆಹಲಿ: ಜಿಎಸ್ ಟಿಯಲ್ಲಿ ದೋಷಪೂರಿತ ರಚನೆಗಳು ಉದ್ಯೋಗ ಹಾಗೂ ಉದ್ಯಮಿಗಳಿಗೆ ಭಾರಿ ಹೊಡೆತ ನೀಡಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಸರಕು ಮತ್ತೆ ಸೇವಾ ತೆರಿಗೆಯಲ್ಲಿ ಅನುಸರಣೆಗಳ ತೊಡಕು ಇದ್ದು, ಉದ್ಯೋಗ ಹಾಗೂ ಉದ್ಯಮದ ಮೇಲೆ ಸಾಕಷ್ಟು ಪ್ರತಿಕೂಲ ಪರಿಣಾಮ ಉಂಟುಮಾಡಿದೆ ಎಂದು ಎಐಸಿಸಿ ಮುಖ್ಯಕಚೇರಿಯಲ್ಲಿ ಜಿಎಸ್ ಟಿ ನಡೆದ ಸಭೆಯಲ್ಲಿ ಮಾತನಾಡಿರುವ ಮಾಜಿ ಪ್ರಧಾನಿ ಸಿಂಗ್, ಒಂದೆಡೆ ನೋಟು ನಿಷೇಧ ವ್ಯವಸ್ಥಿತ ಲೂಟಿ, ಸುಲಿಗೆಯಾಗಿದ್ದು, ಜಿಎಸ್ ಟಿ ಸಾಮಾನ್ಯ ಜನರ ಉದ್ಯೋಗವನ್ನು ಕಸಿದುಕೊಂಡಿದೆ. ಅನೇಕ ಉದ್ಯಮಗಳು ಮುಚ್ಚಿವೆ ಎಂದು ಅಸಮಾಧಾನ ವ್ಯಕ್ತಪಡಿಸಿರುವುದನ್ನು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸಿಂಗ್ ಸುರ್ಜೆವಾಲ ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement