ಇಟಲಿ ಪ್ರಧಾನಿ ಪಾವೊಲೊ ಗೆಂಟಿಲೋನಿ ಅವರನ್ನು ಬರಮಾಡಿಕೊಂಡ ಪ್ರಧಾನಿ ಮೋದಿ 
ದೇಶ

ಭಾರತ ಮತ್ತು ಇಟಲಿ ಬಲವಾದ ಆರ್ಥಿಕ ಸಂಬಂಧವನ್ನು ಹೊಂದಿವೆ: ಪ್ರಧಾನಿ ಗೆಂಟಿಲೊನಿ

ಆರ್ಥಿಕ ಸಂಬಂಧಗಳು, ಸಾಮಾನ್ಯ ಆಸಕ್ತಿ ವಿಷಯಗಳು ಮತ್ತು ಭಯೋತ್ಪಾದನೆ ...

ನವದೆಹಲಿ: ಆರ್ಥಿಕ ಸಂಬಂಧಗಳು, ಸಾಮಾನ್ಯ ಆಸಕ್ತಿ ವಿಷಯಗಳು ಮತ್ತು ಭಯೋತ್ಪಾದನೆ ವಿರುದ್ಧ ಹೋರಾಟ ವಿಷಯಗಳಲ್ಲಿ ಭಾರತ ಮತ್ತು ಇಟೆಲಿ ದೇಶಗಳು ದೃಢವಾಗಿವೆ ಎಂದು ಇಟೆಲಿ ಪ್ರಧಾನಿ ಪಾವೊಲೊ ಗೆಂಟಿಲೋನಿ ಹೇಳಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಮೋದಿಯವರಿಂದ ಭವ್ಯವಾದ ಸ್ವಾಗತ ಸಿಕ್ಕಿದ ನಂತರ ಮಾತನಾಡಿದ ಅವರು, ಎರಡೂ ದೇಶಗಳ ಮಧ್ಯೆ ಗಟ್ಟಿಯಾದ ಆರ್ಥಿಕ ಸಂಬಂಧವಿದೆ.
ಅದನ್ನು ಮತ್ತಷ್ಟು ಗಟ್ಟಿಗೊಳಿಸಲು ಇದೊಂದು ವೇದಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ನಾವು ಸಮಾನ ಆಸಕ್ತಿಯನ್ನು ಹೊಂದಿದ್ದೇವೆ. ಭಾರತದಲ್ಲಿ ಸುಧಾರಣೆ ಕಾರ್ಯಗಳು ನಡೆಯುತ್ತಿವೆ. ಇದು ಇಟೆಲಿಯ ಉದ್ಯಮ ಸಮುದಾಯಕ್ಕೆ ಬಂಡವಾಳ ಹೂಡಿಕೆಗೆ ಒಳ್ಳೆಯ ಅವಕಾಶವಾಗಿದೆ. ಇಟೆಲಿಯಲ್ಲಿ ಕೂಡ ಭಾರತದ ಉತ್ತಮ ಕಂಪೆನಿಗಳು ಹೂಡಿಕೆ ಮಾಡಿವೆ ಎಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.
ಭಯೋತ್ಪಾದನೆ ವಿರುದ್ಧ ಹೋರಾಡಲು ಮತ್ತು ಹವಾಮಾನ ಬದಲಾವಣೆಯನ್ನು ವಿರೋಧಿಸಿ ಕೆಲಸ ಮಾಡಲು ಬದ್ಧರಾಗಿದ್ದೇವೆ ಎಂದು ಕೂಡ ಪಾವೊಲ್ ಗೆಂಟಿಲೋನಿ ಹೇಳಿದರು. ಎರಡೂ ದೇಶಗಳು ಸಾಮಾನ್ಯ ಗುರಿಯನ್ನು ಹೊಂದಿದೆ ಅದು ಪ್ರಜಾಪ್ರಭುತ್ವ. ಈ ನಿಟ್ಟಿನಲ್ಲಿ ಸಂಬಂಧವನ್ನು ಪುನರ್ ಆರಂಭಿಸಲು ತಮ್ಮ ಭೇಟಿ ಒಂದು ವೇದಿಕೆಯಾಗಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!