ಥಾಣೆ: 2009ರಲ್ಲಿ ಮಹಿಳೆಗೆ ಚಮ್ಮಕ್ ಚಲ್ಲೋ ಎಂದು ಕರೆದಿದ್ದ ವ್ಯಕ್ತಿ ಇಂದು ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.
2009ರ ಜನವರಿಯಲ್ಲಿ ಗೃಹಿಣಿಯೊಬ್ಬ ತನ್ನ ಗಂಡನೊಂದಿಗೆ ವಾಕಿಂಗ್ ಮುಗಿಸಿ ಹಿಂದಿರುಗುವಾಗ ಎಡವಿ ಕಸದ ಮೇಲೆ ಬಿದ್ದಿದ್ದರು. ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬ ಮಹಿಳೆಯನ್ನು ಕಂಡು ಚಮ್ಮಕ್ ಚಲ್ಲೋ ಎಂದು ಹೇಳಿದ್ದ ಇದರಿಂದ ಕೋಪಗೊಂಡ ಮಹಿಳೆ ಕಾನೂನು ಸಮರ ನಡೆಸಿದ್ದಳು.
ಈ ಸಂಬಂಧ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾಗ ಪೊಲೀಸರು ದೂರು ಸ್ವೀಕರಿಸಿರಲಿಲ್ಲ. ಇದರಿಂದ ಮಹಿಳೆ ನೇರವಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಸುದೀರ್ಘ 8 ವರ್ಷಗಳ ಬಳಿಕ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಆರ್.ಟಿ ಇಂಗೇಲ್ ವಿಚಾರಣೆ ನಡೆಸಿ ಐಪಿಸಿ ಸೆಕ್ಷನ್ 509ರ ಅಡಿಯಲ್ಲಿ ಆರೋಪಿಗೆ ಲಘು ಜೈಲು ಶಿಕ್ಷೆ ಮತ್ತು 1 ರುಪಾಯಿ ದಂಡವನ್ನು ವಿಧಿಸಿದ್ದಾರೆ.
ಬಾಲಿವುಡ್ ನಟ ಶಾರುಕ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ ರಾ ಒನ್ ಚಿತ್ರದಲ್ಲಿನ ಒಂದು ಹಾಡಿನಲ್ಲಿ ಚಮ್ಮಕ್ ಚಲ್ಲೋ ಎಂಬ ಪದವನ್ನು ಬಳಸಲಾಗಿತ್ತು. ಆನಂತರ ಚಮ್ಮಕ್ ಚಲ್ಲೋ ಪದ ಹೆಚ್ಚು ಪ್ರಸಿದ್ಧಿಯಾಗಿತ್ತು. ಚಮ್ಮಕ್ ಚಲ್ಲೋ ಎಂಬುದು ಹಿಂದಿಯ ಪದವಾಗಿದ್ದು ಇದಕ್ಕೆ ನಿರ್ಧಿಷ್ಟ ಅರ್ಥವಿಲ್ಲ.
ಆದರೆ ನ್ಯಾಯಾಧೀಶರರು ಚಮ್ಮಕ್ ಚಲ್ಲೋ ಎಂಬ ಪದ ಮಹಿಳೆಯನ್ನು ನಿಂದಿಸಲು ಬಳಸಲಾಗುತ್ತಿದೆ. ಇದು ಮಹಿಳೆಯನ್ನು ಕೆರಳಿಸುತ್ತದೆ ಮತ್ತು ಆಕೆಗೆ ಅವಮಾನ ಮಾಡಿದಂತೆ ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics