ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು 
ದೇಶ

ರಾಜಕೀಯ ಲಾಭಕ್ಕಾಗಿ ಜನರು ಭಯೋತ್ಪಾದನೆ ಮತ್ತು ಧರ್ಮವನ್ನು ವಿಲೀನಗೊಳಿಸುತ್ತಿದ್ದಾರೆ: ನಾಯ್ಡು

ತಮ್ಮ ರಾಜಕೀಯ ಲಾಭಕ್ಕಾಗಿ ಕೆಲವರು ಧರ್ಮ ಹಾಗೂ ಭಯೋತ್ಪಾದನೆಯನ್ನು ವಿಲೀನಗೊಳಿಸುತ್ತಿದ್ದಾರೆಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು...

ಹೈದರಾಬಾದ್: ತಮ್ಮ ರಾಜಕೀಯ ಲಾಭಕ್ಕಾಗಿ ಕೆಲವರು ಧರ್ಮ ಹಾಗೂ ಭಯೋತ್ಪಾದನೆಯನ್ನು ವಿಲೀನಗೊಳಿಸುತ್ತಿದ್ದಾರೆಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು ಭಾನುವಾರ ಹೇಳಿದ್ದಾರೆ. 
ಶಮೀರ್ಪೇಟ್ ನಲ್ಲಿ ಆಯೋಜಿಸಿದ್ದ ಇನ್ಸಿಟ್ಯೂಟ್ ಆಫ್ ಇಂಟರ್ ನ್ಯಾಷನಲ್ ಲಾ 78ನೇ ಅಧಿವೇಶನದಲ್ಲಿ ಮಾತನಾಡಿರುವ ಅವರು, ಭಯೋತ್ಪಾದಾನಾ ಪಿಡುಗಿನ ವಿರುದ್ಧ ಹೋರಾಡಲು ಭಾರತ ಸಾಕಷ್ಟು ಶ್ರಮಗಳನ್ನು ಪಡುತ್ತಿದೆ. ಭಯೋತ್ಪಾದನೆಗೆ ಧರ್ಮ, ಬಣ್ಣ ಹಾಗೂ ಲಿಂಗ ಇರುವುದಿಲ್ಲ. ಆದರೆ, ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ಧರ್ಮ ಹಾಗೂ ಭಯೋತ್ಪಾದನೆಯನ್ನು ವಿಲೀನಗೊಳಿಸುತ್ತಿದ್ದಾರೆ. ಇದು ನಿಜಕ್ಕೂ ದುರಾದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ. 
ಮಾನವ ಕುಲಕ್ಕೆ ಭಯೋತ್ಪಾದನೆ ಎಂಬುದು ದೊಡ್ಡ ಶತ್ರುವಾಗಿದೆ. ದೇಶಕ್ಕಾಗಿ ಅಂತರಾಷ್ಟ್ರೀಯ ಸಮುದಾಯದ ಪ್ರತೀಯೊಬ್ಬರೂ ಹಾಗೂ ಎಲ್ಲಾ ವಕೀಲರು, ಕಾನೂನು ವೃತ್ತಿಪರರು ಒಗ್ಗೂಡಿ ಭಯೋತ್ಪಾದನೆ ವಿರುದ್ಧ ದನಿಯೆತ್ತಬೇಕು. ದೇಶಕ್ಕಾಗಿ ಭಯೋತ್ಪಾದನೆ ವಿರುದ್ದ ಕಠಿಣ ಕಾನೂನನ್ನು ಜಾರಿಗೆ ತರಬೇಕು. ಉಗ್ರರಿಗೆ ನೆರವು ನೀಡುತ್ತಿರುವ ಎಲ್ಲಾ ರೀತಿಯ ಮೂಲಗಳಿಗೂ ಕಡಿವಾಣ ಹಾಕಲು ಅಂತರಾಷ್ಟ್ರೀಯ ಒಪ್ಪಂದಗಳಾಗಬೇಕು ಎಂದು ತಿಳಿಸಿದ್ದಾರೆ. 
ಈ ಹಿಂದೆ ಭಾರತ ಅನುಭವಿಸುತ್ತಿದ್ದ ನೋವು ಇತರೆ ದೇಶಗಳಿಗೆ ತಿಳಿಯುತ್ತಿರಲಿಲ್ಲ. ಇದೀಗ ಅಮೆರಿಕ, ಯುರೋಪಿಯನ್ ದೇಶಗಳು ಹಾಗೂ ವಿಶ್ವದ ಎಲ್ಲಾ ದೇಶಗಳಿಗೂ ಆ ನೋವು ಅರ್ಥವಾಗುತ್ತಿದೆ. ಭಯೋತ್ಪಾದನೆಗೆ ಇಂದು ಪ್ರತೀಯೊಬ್ಬರು ಸಂತ್ರಸ್ತರಾಗಿದ್ದಾರೆ. ಹೀಗಾಗಿಯೇ ಭಯೋತ್ಪಾದನೆ ಮಾನವಕುಲಕ್ಕೆ ಶತ್ರು ಎಂದು ನಾನು ಹೇಳಿದ್ದು. ನಿಷ್ಕರುಣಿ ರೀತಿಯಲ್ಲಿಯಲ್ಲಿ ಭಯೋತ್ಪಾದನೆಯನ್ನು ಮಟ್ಟ ಹಾಕಬೇಕು. ಕಾನೂನು, ರಾಜಕೀಯ ಹಾಗೂ ಆಡಳಿತಾತ್ಮಕವಾಗಿಯೇ ಅದನ್ನು ಮಟ್ಟ ಹಾಕಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮಟ್ಟಹಾಕು ಎಂದಿದ್ದಾರೆ. 
ಭಯೋತ್ಪರಾದನೆಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳಬಾರದು. ಭಯೋತ್ಪಾದನೆಯೆಂಬ ದೊಡ್ಡ ಪಿಡುಗನ್ನು ಮಟ್ಟ ಹಾಕಲು ಕಾನೂನು ವಿಧಾನಗಳಿವೆ. ನಾವಿಂದು ನಾಗರೀಕ ಸಮಾಜದಲ್ಲಿ ಬದುಕುತ್ತಿದ್ದೇವೆ. ಇಡೀ ವಿಶ್ವ ಮುಂದಕ್ಕೆ ಹೆಜ್ಜೆಯಿಡುತ್ತಿದೆ. ಜಾಗತಿಕ ಯುಗದಲ್ಲಿ ನಾವು ಜೀವನ ನಡೆಸುತ್ತಿದ್ದೇವೆ. ನಾವು ಪ್ರತ್ಯೇಕವಾಗಿ ಜೀವನ ನಡೆಸುತ್ತಿಲ್ಲ. ಒಗ್ಗಟ್ಟಿನಿಂದ ನಾವು ಎಲ್ಲಾ ರೀತಿಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಮಾನವಕುಲಕ್ಕೆ ಶತ್ರುವಾಗಿ ಪರಿಣಮಿಸಿರುವ ಭಯೋತ್ಪಾದನಾ ಪಿಡುಗನ್ನು ತೊಡೆದುಹಾಕಬಹುದು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!