ನವದೆಹಲಿ: ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ ಹತ್ಯೆ ಸಂಬಂಧ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ರಾಹುಲಾ ಗಾಂಧಿ ಅವರು, "ಕರ್ನಾಟಕದಲ್ಲಿ ದಿಟ್ಟ ಪತ್ರಕರ್ತೆ, ನೇರ ನುಡಿಯ ಚಿಂತಕಿ ಗೌರಿ ಲಂಕೇಶ್ ರನ್ನು ಹತ್ಯೆ ಮಾಡಲಾಗಿದೆ. ಅಹಿಂಸೆಯೇ ಈ ದೇಶದ ಇತಿಹಾಸ. ಕೊಲೆಯನ್ನು ಯಾರೂ ಸಮರ್ಥಿಸುವಂತಿಲ್ಲ. ಪ್ರಧಾನಿ ಮೋದಿ ಅವರೋರ್ವ ಕೌಶಲ ಹಿಂದೂ ರಾಜಕಾರಣಿ. ಮೋದಿ ಏನೇ ಹೇಳಿದರೂ ಅದರಲ್ಲಿ ಎರಡು ಅರ್ಥವಿರುತ್ತದೆ. ಪತ್ರಕರ್ತೆಯೊಬ್ಬಳು ಮತಾಂಧರಿಗೆ ಬಲಿಯಾಗಿರುವುದು ನಿಜಕ್ಕೂ ದೊಡ್ಡ ದುರದೃಷ್ಟಕರ".
"ಜನ ಪ್ರಧಾನಿ ಮೋದಿ ಮೌನಿ ಎಂದು ಹೇಳುತ್ತಾರೆ. ಆದರೆ ಗಮನಿಸಬೇಕಾದ ಅಂಶವೆಂದರೆ ನರೇಂದ್ರ ಮೋದಿ ಅವರ ಒಟ್ಟಾರೆ ಚಿಂತನೆಯೇ ಜನರ ಧ್ವನಿಯನ್ನು ದಮನಿಸುವುದೇ ಆಗಿದೆ. ತಮ್ಮ ಮತ್ತು ತಮ್ಮ ಪಕ್ಷದ ವಿರುದ್ಧ ಅಥವಾ ಆರ್ ಎಸ್ಎಸ್ ವಿರುದ್ಧ ಮಾತನಾಡದಂತೆ ಒತ್ತಡ ಹೇರುತ್ತಾರೆ. ಇಲ್ಲವಾದರೆ ಅವರನ್ನು ಕೊಲ್ಲುತ್ತಾರೆ. ಕೆಲವೊಮ್ಮೆ ಪ್ರಧಾನಿ ಮೋದಿ ಅವರು ಒತ್ತಡಕ್ಕೆ ಮಣಿದು ಮೌನ ಮುರಿಯುತ್ತಾರೆ; ಆದರೆ ಅವರ ಒಟ್ಟು ಮೌನದ ಹಿಂದಿನ ಉದ್ದೇಶವೇ ಜನರ ಧ್ವನಿಯನ್ನು ದಮನಿಸುವುದು' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.