ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭದ್ರತಾ ಸಿಬ್ಬಂದಿ ನಿಗೂಢ ಕಣ್ಮರೆ

ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭದ್ರತೆಗಾಗಿ ನಿಯೋಜಿತರಾಗಿದ್ದ ವಿಶೇಷ ಭದ್ರತಾ ಪಡೆಯ ​(ಎಸ್ ಪಿಜಿ) ಓರ್ವ ಕಮ್ಯಾಂಡೋ ಕಳೆದ 3 ದಿನಗಳಿಂದ ನಿಗೂಢವಾಗಿ ಕಣ್ಮರೆಯಾಗಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭದ್ರತಾ ಸಿಬ್ಬಂದಿ ನಿಗೂಢ ಕಣ್ಮರೆ
Raghavendra Adiga
Updated On : 6 Sept 2017, 5:41 am
ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭದ್ರತೆಗಾಗಿ ನಿಯೋಜಿತರಾಗಿದ್ದ ವಿಶೇಷ ಭದ್ರತಾ ಪಡೆಯ ​(ಎಸ್ ಪಿಜಿ) ಓರ್ವ ಕಮ್ಯಾಂಡೋ ಕಳೆದ 3 ದಿನಗಳಿಂದ ನಿಗೂಢವಾಗಿ ಕಣ್ಮರೆಯಾಗಿದ್ದಾರೆ.
ಎಸ್ ​ಪಿಜಿ ಕಮ್ಯಾಂಡೋ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಕೇಶ್​ ಕುಮಾರ್​ ಸೆಪ್ಟೆಂಬರ್​ 3 ರಿಂದ ಕಾಣೆಯಾಗಿದ್ದಾರೆ ಎಂದು ಅವರ ಕುಟುಂಬಸ್ಥರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಕೇಶ್​ ಕುಮಾರ್​ ಅವರು ಸೆಪ್ಟೆಂಬರ್​ 1 ರಂದು ಎಂದಿನಂತೆ 10 ಜನಪತ್ ​ನ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತೆರಳಿದ್ದು ನಂತರ ತಮ್ಮ ಸರ್ವಿಸ್​ ರಿವಾಲ್ವರ್​ ಮತ್ತು ಮೊಬೈಲ್​ ಫೋನ್​ ಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.ಅಲ್ಲಿಂದೀಚೆಗೆ ರಾಕೇಶ್ ವರ ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿಲ್ಲ. 

Advertisement

Advertisement

ಕೆಲಸದ ಒತ್ತಡವಿರಬಹುದು ಎಂದು ಕುಟುಂಬಸ್ಥರಗೂ ಸಹ ಪ್ರಾರಂಭದಲ್ಲಿ ಒಂದೆರಡು ದಿನ ಕಾದು ನೋಡಿದ್ದಾರೆ. ಆದರೆ ರಾಕೇಶ್ ಸುಳಿವಿರದ ಕಾರನ ಸೆಪ್ಟೆಂಬರ್​ 3 ರಂದು ಕುಟುಂಬಸ್ಥರು ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತೆರಳಿ ವಿಚಾರಿಸಿದಾಗ ರಾಕೇಶ್​ ನಾಪತ್ತೆಯಾಗಿರುವುದು ತಿಳಿದು ಬಂದಿದೆ.
ರಾಕೇಶ್ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ದ್ವಾರಕಾ ಎನ್ನುವಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನು. ಪ್ರಕರಣ ದಾಕಲಿಸಿಕೊಂಡ ಪೋಲಿಸರು ತನಿಖೆ ಪ್ರಾರಂಭಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments