ನವದೆಹಲಿ: ನದಿ ಜೋಡಣೆ ಸಂಬಂಧ ಯೋಜನೆಗಳನ್ನು ಶೀಘ್ರಗತಿಯಲ್ಲಿ ಪ್ರಾರಂಭಿಸಬೇಕೆಂದು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ ಎನ್ ಡಿಎ ಸರ್ಕಾರದ ಪ್ರಮುಖ ಯೋಜನೆ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿಗಳ ಸಭೆ ಕಕರೆಯಲು ಅವರು ನಿರ್ಧರಿಸಿದ್ದಾರೆ.
ಜಲ ಸಂಪನ್ಮೂಲಗಳ ಸಚಿವಾಲಯ ಕೆಲಸವನ್ನು ಪರಿಶೀಲಿಸಿದ ಗಡ್ಕರಿ, ಮೂರು ನದಿ ಜೋಡಣೆ ಯೋಜನೆಗಳಾದ ಕೆನ್-ಬೆಟ್ವಾ, ದಮಾಂಗಂಗಾ-ಪಿಂಜಲ್ ಮತ್ತು ಪರ್-ತಪಿ-ನರ್ಮದಾಗಳನ್ನು ತಕ್ಷಣದ ಪ್ರಾರಂಭಿಸಲು ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನದಿ ಜೋಡಣೆಯು ದೇಶದ ವಿವಿಧ ಭಾಗಗಳಲ್ಲಿ ಪ್ರವಾಹ ಮತ್ತು ಬರಗಾಲದ ಸಮಸ್ಯೆಯನ್ನು ಪರಿಹರಿಸಲಿದೆಎಂದು ಗಡ್ಕರಿ ಹೇಳಿದರು.
"ಅಟಲ್ ಜಿ ಕನಸನ್ನು ನನಸಾಗಿಸಲು ಮತ್ತು ನದಿಗಳ ಜೋಡಣೆ ಅನ್ನು ತ್ವರಿತಗೊಳಿಸಲು ನಾನು ನಿರ್ಧರಿಸಿದ್ದೇನೆ. ಬಾಕಿ ಉಳಿದಿರುವ ನದಿ ನೀರು ವಿವಾದಾಂಶಗಳನ್ನು ಬಗೆಹರಿಸಲು ನಾನು ಮುಖ್ಯಮಂತ್ರಿಗಳ ಸಭೆ ಕರೆಯಲಿದ್ದೇನೆ ಎಂದು ಗಡ್ಕರಿ ತಿಳಿಸಿದ್ದಾರೆ.
ದೇಶದ ಮೊದಲ ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಯನ್ನು ಮಧ್ಯ ಪ್ರದೇಶದಲ್ಲಿ ಪ್ರಾರಂಭಿಸಲಾಗುವುದು ಎಂದರು.