ನವದೆಹಲಿ: ಬ್ಲೂವೇಲ್ ಚಾಲೆಂಜ್ ಆಟದ ಕೊನೆಯ ಹಂತದಲ್ಲಿ 2 ಬಾರಿ ಆತ್ಮಹತ್ಯೆಗೆ ಯತ್ನಿಸಿ ರಕ್ಷಿಸಲ್ಪಟ್ಟಿದ್ದ ರಾಜಸ್ತಾನದ ಜೋಧ್ಪುರದ 17 ವರ್ಷದ ಯುವತಿ ಬುಧವಾರ ಮತ್ತೆ ಮೂರನೇ ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ತಿಳಿದುಬಂದಿದೆ.
ಬ್ಲೂವೇಲ್ ಚಾಲೆಂಜ್ ನ ಕೊನೆಯ ಹಂತ ತಲುಪಿದ್ದ ಜೋಧ್ಪುರ ಯುವತಿ ಕೊನೆಯ ಟಾಸ್ಕ್ ಪೂರ್ಣಗೊಳಿಸದಿದ್ದರೆ ಆಟದ ನಿರ್ವಾಹಕರು ತಾಯಿಯನ್ನು ಕೊಲ್ಲುತ್ತಾರೆಂಬ ಭೀತಿಯಲ್ಲಿ ಯುವತಿ ಕೆರೆಗೆ ಹಾರಿ ಈ ಹಿಂದೆ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ, ಸ್ಥಳದಲ್ಲಿದ್ದ ವಾಹನ ಚಾಲಕರು ಯುವತಿಯನ್ನು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ, ನಿನ್ನೆ ಯುವತಿ ಆಸ್ಪತ್ರೆಯಲ್ಲಿದ್ದ ನಿದ್ರೆ ಮಾತ್ರೆಗಳನ್ನು ತೆಗೆದುಕೊಂಡು ಮತ್ತೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ತಿಳಿದುಬಂದಿದೆ. ಈ ನಡುವೆ ಪಂಜಾಬ್ ನಲ್ಲೂ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಬಾಲಕನೊಬ್ಬನನ್ನು ರಕ್ಷಣೆ ಮಾಡಲಾಗಿದೆ.