ನವದೆಹಲಿ: ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣ ಮಾಸುವ ಮುನ್ನವೇ ಪತ್ರಕರ್ತೆಯರು, ಹೋರಾಟಗಾರ್ತಿಯರು ಸೇರಿದಂತೆ ಒಟ್ಟು ಐವರು ಮಹಿಳೆಯರಿಗೆ ವ್ಯಕ್ತಿಯೋರ್ವ ಜೀವ ಬೆದರಿಕೆ ಹಾಕಿದ್ದಾನೆಂದು ತಿಳಿದುಬಂದಿದೆ.
ಶೋಭಾ ಡೇ, ಅರುಂಧತಿ ರಾಯ್, ಕವಿತಾ ಕೃಷ್ಣನ್, ಶೀಲಾ ರಶೀದ್, ಸಾಗರಿಕಾ ಘೋಷ್ ಅವರನ್ನು ದೇಶದ್ರೋಹಿಗಳೆಂದು ಜರಿದಿರುವ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ್ದಾನೆಂದು ವರದಿಗಳು ತಿಳಿಸಿವೆ.
ಗೌರಿ ಲಂಕೇಶ್ ಅವರನ್ನು ಹತ್ಯೆಗೈದ ದುಷ್ಕರ್ಮಿಗಳನ್ನು ಹೊಗಳಿರುವ ವ್ಯಕ್ತಿ ಶೋಭಾ ಡೇ, ಅರುಂಧತಿ ರಾಯ್, ಸಾಗರಿಕಾ ಘೋಷ್, ಕವಿತಾ ಕೃಷ್ಣನ್ ಹಾಗೂ ಶೀಲಾ ರಶೀದ್ ಅವರನ್ನು ದೇಶದ್ರೋಹಿಗಳೆಂದು ಜರಿದಿದ್ದು, ದೇಶದ್ರೋಹಿಗಳಿಗೆ ಗೌರಿ ಲಂಕೇಶ್ ಹತ್ಯೆ ಒಂದು ಪಾಠವಾಗಲಿ ಎಂದು ಬರೆದುಕೊಂಡಿದ್ದಾನೆ.
ಜೀವ ಬೆದರಿಕೆ ಹಿನ್ನಲೆಯಲ್ಲಿ ಪತ್ರಕರ್ತೆ ಸಾಗರಿಕಾ ಘೋಷ್ ಅವರು ದೆಹಲಿ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಐಟಿ ಕಾಯ್ದೆಯಡಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.