ದೇಶ

ರೊಹಿಂಗ್ಯಾ ವಲಸಿಗರು ಇಸಿಸ್ ಉಗ್ರರಿಗಿಂತ ಅಪಾಯಕಾರಿ, ಭಾರತದಿಂದ ಹೊರಗೆ ಹಾಕಬೇಕು: ಸಾಧ್ವಿ ಪ್ರಾಚಿ

Manjula VN
ಮೀರುತ್: ರೊಹಿಂಗ್ಯಾ ಮುಸ್ಲಿಂ ವಲಸಿಗರು ಇಸಿಸ್ ಉಗ್ರರಿಗಿಂತ ಅಪಾಯಕಾರಿಯಾಗಿದ್ದು, ಅವರನ್ನು ಮೊದಲು ಭಾರತದಿಂದ ಹೊರಗೆ ಹಾಕಬೇಕು ಎಂದು ಹಿಂದುತ್ವ ನಾಯಕಿ ಸಾಧ್ವಿ ಪ್ರಾಚಿಯವರು ಹೇಳಿದ್ದಾರೆ. 
ಮುಜಾಫರ್ನಗರದಲ್ಲಿ ಆರ್ಯ ಸಮಾಜ ಮಂದಿರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ರೊಹಿಂಗ್ಯಾ ಬಿಕ್ಕಟ್ಟು ಕುರಿತಂತೆ ಮಾತನಾಡಿರುವ ಪ್ರಾಚಿಯವರು, ರೊಹಿಂಗ್ಯಾ ಮುಸ್ಲಿಮರು ಇಸಿಸ್ ಉಗ್ರರಿಗಿಂತ ಅಪಾಯಾಕಾರಿ. ಮ್ಯಾನ್ಮಾರ್ ನಿರಾಶ್ರಿತರಿಗೆ ಭಾರತದಲ್ಲೇಕೆ ಆಶ್ರಯ ನೀಡಬೇಕು?...ವಿಶ್ವದಲ್ಲಿ ಸಾಕಷ್ಟು ಮುಸ್ಲಿಮೇತರ ರಾಷ್ಟ್ರಗಳಿದ್ದೂ, ಆ ರಾಷ್ಟ್ರಗಳಿಗೆ ಹೋಗಬಹುದಿತ್ತು ಎಂದು ಹೇಳಿದ್ದಾರೆ. 
ರೊಹಿಂಗ್ಯಾ ವಲಸಿಗರು ಈಗಾಗಲೇ ಭಾರತದಲ್ಲಿ ನೆಲೆಯೂರಿದ್ದು, ವಿಶ್ವದಲ್ಲಿರುವ 56 ಮುಸ್ಲಿಮೇತರ ರಾಷ್ಟ್ರಗಳಿಗೇಕೆ ಅವರು ಹೋಗುತ್ತಿಲ್ಲ? ಹೆಚ್ಚಿನ ಮತಾಂಧತೆ ಹೊಂದಿರುವ ಕಾರಣ ಅವರನ್ನು ಯಾವುದೇ ದೇಶ ಒಪ್ಪಿಕೊಳ್ಳುತ್ತಿಲ್ಲ. ಕಾಶ್ಮೀರದಲ್ಲಿ ಈಗಾಗಲೇ 15,000ಕ್ಕೂ ಹೆಚ್ಚು ರೊಹಿಂಗ್ಯಾ ಮುಸ್ಲಿಮರಿದ್ದಾರೆ. 40,000 ವಲಸಿಗರು ಭಾರತದ ವಿವಿಧೆಡೆ ನೆರೆಯೂರಿದ್ದಾರೆ. ಭಾರತ ಅವರ ತಂದೆಯಂದಿರ ಧರ್ಮಶಾಲೆ ಎಂದು ಅವರು ತಿಳಿದಿದ್ದಾರೆಂದು ತಿಳಿಸಿದ್ದಾರೆ. 
ಇದೇ ವೇಳೆ ಈ ಹಿಂದೆ ಸಚಿವ ಕಿರಣ್ ರಿಜಿಜು ಅವರು ನೀಡಿದ್ದ ಹೇಳಿಕೆಗೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ರೊಹಿಂಗ್ಯಾ ವಲಸಿಗರ ಕುರಿತಂತೆ ಕೂಡಲೇ ಭಾರತ ಕಠಿಣ ಕ್ರಮವನ್ನು ಕೈಗೊಳ್ಳಬೇಕು. ರೊಹಿಂಗ್ಯಾ ವಲಸಿಗರನ್ನು ಮೊದಲು ದೇಶದಿಂದ ಹೊರಗೆ ಹಾಕಬೇಕು ಎಂದಿದ್ದಾರೆ. 
ಸಾವಿರಾರು ಪಂಡಿತರನ್ನು ಕಾಶ್ಮೀರದಿಂದ ಹೊರಗೆ ಹಾಕಿದ್ದಾಗ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮೌನವಹಿಸಿತ್ತು. ಇದೀಗ ರೊಹಿಂಗ್ಯಾ ವಲಸಿಗರ ಕುರಿತಂತೆ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡುತ್ತಿದೆ. ರೊಹಿಂಗ್ಯಾ ಗಡಿಪಾರು ವಿಚಾರ ಕುರಿತ ಅರ್ಜಿಗಳನ್ನು ಸುಪ್ರೀಂಕೋರ್ಟ್ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ವೀಕರಿಸಿದ್ದು, ಇದು ಅವುಗಳ ಪಾತ್ರಗಳ ಮೇಲೆ ಶಂಕೆಗಳನ್ನು ಮೂಡಿತೊಡಗಿದೆ ಎಂದು ಹೇಳಿದ್ದಾರೆ. 
ರೊಹಿಂಗ್ಯಾ ಬಿಕ್ಕಟ್ಟು ಕುರಿತಂತೆ ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಕಿರಣ್ ರಿಜಿಜು ಅವರು, ರೊಹಿಂಗ್ಯಾ ಮುಸ್ಲಿಮರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದಲ್ಲಿ ನೊಂದಾವಣಿಯಾಗಿದ್ದಾರೋ ಅಥವಾ ಇಲ್ಲವೋ, ಇದೀಗ ಭಾರತದಲ್ಲಿ ಅವರು ಅಕ್ರಮ ವಲಸಿಗರಾಗಿದ್ದು, ಅವರನ್ನು ಗಡಿಪಾರು ಮಾಡಬೇಕಿದೆ ಎಂದು ಹೇಳಿದ್ದರು. 
SCROLL FOR NEXT