ಹೈದರಾಬಾದ್: ಸುಂಕ ಇಲಾಖೆ ಅಧಿಕಾರಿಗಳು ಇಂದು ಬೆಳಗ್ಗೆ ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಮೂಲದ 8 ಚಿನ್ನದ ಬಿಸ್ಕತ್ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಅವು ಸುಮಾರು 932 ಗ್ರಾಂ ತೂಕವನ್ನು ಹೊಂದಿದ್ದು 29,19,956 ಲಕ್ಷ ರೂಪಾಯಿ ಬೆಲೆಬಾಳುವದ್ದಾಗಿತ್ತು. ದುಬೈಯಿಂದ ಬಂದ ಪ್ರಯಾಣಿಕನಿಂದ ಈ ಚಿನ್ನವನ್ನು ವಶಪಡಿಸಿಕೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಜಾಗ್ರತ ಘಟಕದ ಗುಪ್ತಚರ ಇಲಾಖೆಯ ಸುಂಕ ಅಧಿಕಾರಿಗಳಿಂದ ಇಂದು ಬೆಳಗ್ಗೆ 7 ಗಂಟೆ 50 ನಿಮಿಷ ಸುಮಾರಿಗೆ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಯಾಣಿಕ ಚಿನ್ನದ ತುಂಡನ್ನು ಪ್ಯಾಂಟಿನ ಕಿಸೆ ಮತ್ತು ಸಾಕ್ಸ್ ನಲ್ಲಿ ತುಂಬಿಸಿಟ್ಟುಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದು, ಮುಂದಿನ ವಿಚಾರಣೆ ನಡೆಯುತ್ತಿದೆ.