ದೇಶ

ಇನ್ನು ಮುಂದೆ ದೆಹಲಿಯ ನಾಲ್ಕು ಚಕ್ರದ ವಾಹನಕ್ಕೂ ಸಿಗಲಿದೆ 'ಹಸಿರು ಪರವಾನಗಿ'

Raghavendra Adiga
ನವದೆಹಲಿ: ದೆಹಲಿ ರಾಜ್ಯ ಸಾರಿಗೆ ಪ್ರಾಧಿಕಾರ (ಎಸ್ ಟಿಎ) 'ಪರಿಸರ ಸ್ನೇಹಿ ಸೇವೆ' ಅಡಿಯಲ್ಲಿ ಸಿಎನ್ ಜಿ ಚಾಲಿತ ನಾಲ್ಕು ಚಕ್ರದ ವಾಹನಗಳಿಗೆ ಪರವಾನಗಿ ನೀಡಲು ನಿರ್ಧರಿಸಿದೆ, ಪ್ರಸ್ತುತ ಮೂರು-ಚಕ್ರ ಹಸಿರು ವಾಹನಗಳಿಗೆ ಮಾತ್ರ ಹಸಿರು ಪರವಾನಗಿ ನೀದಲಾಗುತ್ತಿದೆ.
ಇತ್ತೀಚಿನ ಸಭೆಯಲ್ಲಿ ಎಸ್ ಟಿಎ'ಪರಿಸರ ಸ್ನೇಹಿ ಸೇವೆಯ ವಿಸ್ತರಣೆ'ಗೆ ಅನುಮೋದನೆ ನೀಡಿದೆ. ನಗರದ ಕಡೆಯ ಅಂಚಿನವರೆಗೂ ಸಂಪರ್ಕವನ್ನು ಪಡೆಯುವಂತಾಗಲು ನಾಲ್ಕು ಚಕ್ರಗಳ ಹಸಿರು ವಾಹನಗಳನ್ನು ಸೇರ್ಪಡೆಗೊಳಿಸಲು ನಿರ್ಧರಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ, 'ಪರಿಸರ-ಸ್ನೇಹಿ ಸೇವಾ' ಪರವಾನಗಿಗಳನ್ನು ಬ್ಯಾಟರಿ ಮತ್ತು ಸಿಎನ್ ಜಿ ಗಳಲ್ಲಿ ಚಾಲನೆಗೊಳ್ಳುವ  ಮೂರು-ಚಕ್ರ ದ ವಾಹನಗಳಿಗೆ ಮಾತ್ರ ನೀಡಲಾಗುತ್ತದೆ, ಅವುಗಳಲ್ಲಿ ಹೆಚ್ಚಿನವು 15ವರ್ಷದ ಮಿತಿಯನ್ನು ಸಮೀಪಿಸುತ್ತಿವೆ, ಪರಿಸರ ಸ್ನೇಹಿ ವಾಹನಗಳು ಕೆಲವು ಮೆಟ್ರೋ ಕೇಂದ್ರಗಳಿಂದ ವಾಸಯೋಗ್ಯ ಪ್ರದೇಶ, ಅನಧಿಕೃತ ವಾಸಸ್ಥಳಗಳು ಮತ್ತು ಹಳ್ಳಿಗಳಲ್ಲಿನ ಹತ್ತಿರದ ಸ್ಥಳಗಳಿಗೆ ಹೋಗುತ್ತವೆ.
"ಕಳೆದ ವಾರ ನಡೆದ ಸಭೆಯಲ್ಲಿ ಎಸ್ ಟಿಎ ಸಮಿತಿಯ ಸದಸ್ಯರು ಸಿಎನ್ ಜಿ ಮತ್ತು ಬ್ಯಾಟರಿ ಚಾಲಿತ ನಾಲ್ಕು ಚಕ್ರ ವಾಹನಗಳಿಗೆ ಪರಿಸರ ಸ್ನೇಹಿ ಸೇವೆಗೆ ಅನುಮತಿ ನೀಡುವಂತೆ ಪ್ರಸ್ತಾಪ ಮಂಡಿಸಿದ್ದರು" ಎಂದು ಮಂಡಳಿಯ ಸದಸ್ಯರು ಹೇಳಿದರು.
"ಪರಿಸರ-ಸ್ನೇಹಿ ಸೇವೆ'ಯಡಿಯಲ್ಲಿ ಚಾಲನೆಯಲ್ಲಿರುವ ವಾಹನಗಳ ಸಂಖ್ಯೆಯನ್ನು ಉತ್ತೇಜಿಸುವ ಮೂಲಕ ಈ ಕ್ರಮವು ಕಡೆಯ ಅಂಚಿನವರೆಗೂ ಸಂಪರ್ಕ ಸೇವೆಯನ್ನು ಒದಗಿಸಿ ಸಂಚಾರ ಸಮಸ್ಯೆಯನ್ನು ಬಗೆಹರಿಸಲಿದೆ" ಎಂದು ಅವರು ಹೇಳಿದರು.
2002 ರಲ್ಲಿ ಪ್ರಾರಂಭವಾದ 'ಪರಿಸರ ಸ್ನೇಹಿ ಸೇವಾ' ಪರವಾನಗಿಗಳನ್ನು 632 ವಾಹನಗಳಿಗೆ ನೀಡಲಾಗಿದ್ದು, ಅವುಗಳು 15 ವರ್ಷಗಳ ರಸ್ತೆ ಸೇವೆ ನೀಡಿವೆ ಈಗ ಅವುಗಳನ್ನು ಬದಲಿಸಲು ಮಂಡಳಿಯು ಶಿಫಾರಸು ಮಾಡಿದೆ.
ಸಾರಿಗೆ ಇಲಾಖೆಯು ಬ್ಯಾಟರಿಯಿಂದ ಚಲಿಸುವ ಮೂರು ಚಕ್ರ ವಾಹನಗಳಿಗೆ 10 ಮಂದಿ ಪ್ರಯಾಣಿಸಲು ಅನುಮತಿ ನೀಡಿದೆ. ಆದರೆ, ನಾಲ್ಕು ಚಕ್ರದ ವಾಹನ ಪ್ರಯಾಣದಲ್ಲಿ ಚಾಲಕ ಸೇರಿ ಆರು ಮಂದಿಗೆ ಮಾತ್ರ ಅನುಮತಿಸಲಾಗುತ್ತದೆ.
SCROLL FOR NEXT