ದೇಶ

ಭಾರತೀಯ ನೌಕಾಪಡೆ ಮಹಿಳೆಯರಿಂದ ವಿಶ್ವ ಪರ್ಯಟನೆ: ಗೋವಾದಲ್ಲಿ ರಕ್ಷಣಾ ಸಚಿವೆ ನಿರ್ಮಲಾರಿಂದ ಚಾಲನೆ

Raghavendra Adiga
ಪಣಜಿ: ಭಾರತೀಯ ನೌಕಾ ಪಡೆಯ ಮಹಿಳಾ ತಂಡದ ವಿಶ್ವ ಪರ್ಯಟನೆ ಗೆ ಗೋವಾ ರಾಜಧಾನಿ ಪಣಜಿಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನೌಕಾದಳದ ಉನ್ನತ ಅಧಿಕಾರಿಗಳು ಮತ್ತು ರಕ್ಷಣಾ ಸಚಿವಾಲಯದ ಸಿಬ್ಬಂದಿ ಹಾಜರಿದ್ದರು.
ಪಣಜಿ ಸಮೀಪದ ವೆರೆಮ್‍ ನ ಐಎನ್‍ಎಸ್ ಮಾಂಡೋವಿ ದೋನಿ ಕೊಳದಿಂದ ಮಧ್ಯಾಹ್ನ 12.30ಕ್ಕೆ ವಿಶ್ವ ಪರ್ಯಟನೆ ಪ್ರಾರಂಭವಾಗಿದ್ದು ಪುಟ್ಟ ನಾವೆಯ ಮೂಲಕ ಮಹಿಳಾ ತಂಡ ಇದೇ ಪ್ರಪ್ರಥಮ ಬಾರಿಗೆ ಪ್ರಪಂಚ ಪರ್ಯಟನೆ ಕೈಗೊಂಡಿದೆ.
ಸ್ವದೇಶೀ ನಿರ್ಮಿತ ಐಎನ್‍ಎಸ್‍ವಿ ತರಿಣಿ ಹಾಯಿ ದೋಣಿ ಮೂಲಕ ಈ ಸಾಹಸಯಾನ ಆರಂಭವಾಗಿದ್ದು , ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈ ಸಂದರ್ಭದಲ್ಲಿ ಅನೇಕ ಸಾಗರಗಳು, ಸಮುದ್ರಗಳು ಮತ್ತು ಸರೋವರಗಳನ್ನು ನೌಕಾ ಪಡೆಯ ವನಿತೆಯರು ದಾಟುವವರಿದ್ದಾರೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮೊದಲಾದ ದೇಶಗಳ ಬಂದರುಗಳಲ್ಲಿ ಈ ತಂಡ ವಿಶ್ರಾಂತಿ ಪಡೆಯಲಿದೆ.
ಲೆಫ್ಟಿನೆಂಟ್ ಕಮಾಂಡರ್ ವರ್ತಿಕಾ ಜೋಶಿ ಸೇರಿ ಒಟ್ಟು ಆರು ಮಹಿಳೆಯರ ತಂದ ಈ ವಿಶ್ವ ಪರ್ಯಟನೆ ಕೈಗೊಂಡಿದೆ. 
ಲೆಫ್ಟಿನೆಂಟ್ ಕಮಾಂಡರ್ ಪ್ರತಿಭಾ ಜಾಮ್ವಾಲ್, ಲೆಫ್ಟಿನೆಂಟ್ ಐಶ್ವರ್ಯಾ ಬೊಡ್ಡಪತಿ, ಲೆಫ್ಟಿನೆಂಟ್ ಪತಾಪಪಲ್ಲಿ ಸ್ವಾತಿ, ಲೆಫ್ಟಿನೆಂಟ್ ವಿಜಯ ದೇವಿ ಮತ್ತು ಲೆಫ್ಟಿನೆಂಟ್ ಪಾಯಲ್ ಗುಪ್ತಾ ಅವರುಗಳು ಈ ತಂದದಲ್ಲಿನ ಇತರೆ ಸದಸ್ಯರಾಗಿದ್ದಾರೆ.
SCROLL FOR NEXT