ದೇಶ

ಮಕ್ಕಳಿಗೆ ನಮ್ಮ ಶಾಲೆಗಳು ಸುರಕ್ಷಿತವಾಗಿಲ್ಲ: ನೊಬೆಲ್ ಪುರಸ್ಕೃತ ಕೈಲಾಶ್ ಸತ್ಯಾರ್ಥಿ

Raghavendra Adiga
ಕನ್ಯಾಕುಮಾರಿ: ಗುರುಗಾಂವ್ ನ ರಿಯಾನ್ ಇಂಟರ್ನ್ಯಾಷನಲ್ ಸ್ಕೂಲ್, ದೆಹಲಿಯ ಟಾಗೋರ್ ಪಬ್ಲಿಕ್ ಸ್ಕೂಲ್ ನಲ್ಲಿ  ನಡೆದ ಲೈಂಗಿಕ ಕಿರುಕುಳದಿಂದ ಸಂತ್ರಸ್ತರಾದವರೂ ಸೇರಿ ಇತ್ತೀಚೆಗೆ ಶಾಲೆಗಳಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳನ್ನು, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಖಂಡಿಸಿದ್ದಾರೆ. ಭಾರತದಲ್ಲಿ ಮಕ್ಕಳಿಗೆ ಶಾಲೆಗಳು ಸುರಕ್ಷಿತವಾಗಿಲ್ಲ ಎಂದು ಹೇಳಿರುವ ಅವರು . ಭದ್ರತಾ ಕ್ರಮಗಳಿಗೆ ಹೆಚ್ಚು ಒತ್ತು ನೀದಬೇಕಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
"ಪ್ರತಿ ಮಗುವೂ ಶಿಕ್ಷಣವನ್ನು ಪಡೆಯಬೇಕೆಂದು ನಾನು ಆಶಿಸುತ್ತೇನೆ ನಾನು ಯಾವಾಗಲೂ ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದೇನೆ. ಶಾಲೆ ಮಕ್ಕಳಿಗೆ ಸುರಕ್ಷಿತ ಸ್ಥಳವೆಂದು ಪರಿಗಣಿಸಲಾಗಿದೆ.ಆದರೆ ಇತ್ತೀಚಿನ ದುಷ್ಕೃತ್ಯಗಳ ಕುರಿತು ಓದಿದಾಗ ಶಾಲೆಗಳು ಸಹ ಸುರಕ್ಷಿತವಲ್ಲ. ನಮ್ಮ ಶಾಲೆಗಳು ಮಕ್ಕಳಿಗೆ ಭದ್ರತೆಯನ್ನು ಖಾತರಿಪಡಿಸುವಲ್ಲಿ ವಿಫಲವಾಗಿದೆ, "ನೊಬೆಲ್ ಪ್ರಶಸ್ತಿ ವಿಜೇತರಾದ ಸತ್ಯಾರ್ಥಿ ಹೇಳಿದರು.
ದೇಶದಾದ್ಯಂತ ಮಕ್ಕಳ ಕಳ್ಳಸಾಗಣೆ ಮತ್ತು ಮಕ್ಕಳ ಲೈಂಗಿಕ ದುರುಪಯೋಗದ ವಿರುದ್ಧ ಹೋರಾಟ ನಡೆಸಲು ಇತ್ತೀಚೆಗೆ 'ಭಾರತ್ ಯಾತ್ರೆ' ಉದ್ದೇಶಿಸಿದ್ದ ಸತ್ಯಾರ್ಥಿ ಇತ್ತೀಚಿನ ಘಟನೆಗಳಿಂದ ಹೆತ್ತವರ ಮತ್ತು ಮಕ್ಕಳ ಮನಸ್ಸಿನಲ್ಲಿ ಶಿಕ್ಷಣದ ಕುರಿತು ಭಯ ಮತ್ತು ಆತಂಕ ವನ್ನು ತುಂಬುತ್ತವೆ. ಇದು 'ಅವಮಾನದ ವಿಷಯ' ಎಂದು ಖಂಡಿಸಿದರು. 
ನನ್ನ ಯಾತ್ರೆಯ ಸಮಯದಲ್ಲಿ, ನಾನು ಅತ್ಯಾಚಾರಕ್ಕೊಳಗಾಗಿದ್ದ ಚಿಕ್ಕ ಹುಡುಗಿಯನ್ನು ಭೇಟಿಯಾಗಿದ್ದೆ, ಶಾಲೆಗೆ ಹೋಗುವುದರ ಕುರಿತು ನಾನು ಕೇಳಿದೊದನೆ, ಅವಳು ನಡುಗಲು ಪ್ರಾರಂಭಿಸಿದಳು.ಅವಳು ತೀವ್ರ ಅಸ್ವಸ್ಥತೆಗೆ ಒಳಗಾಗಿದ್ದಳು. ಇದು ವಾಸ್ತವ ಸ್ಥಿತಿ ಇಂತಹಾ ಘಟನೆಗಳಿಂದಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸ್ಸುವ ಕುರಿತು  ಪೋಷಕರು ಆತಂಕಕ್ಕೀದಾಗುತ್ತಾರೆ."ಎಂದು ಅವರು ಹೇಳಿದರು.
ಕಳೆದ ಎರಡು ದಿನಗಳಲ್ಲಿ ಮುಗ್ಧ ಮನಸ್ಸಿನ ಶಾಲಾ ಮಕ್ಕಳು ಶಾಲೆಯ ಸಿಬ್ಬಂದಿಗಳಿಂದಲೇ ತೀವ್ರವಾದ ದೌರ್ಜನ್ಯಗಳಿಗೆ ಸಾಕ್ಷಿಯಾಗಿದ್ದವು. ಇಬ್ಬರು ಚಿಕ್ಕ ಮಕ್ಕಳನ್ನು ಗುಗಾಂವ್ ಮತ್ತು ದೆಹಲಿಯಲ್ಲಿ ನಡೆದ  ಎರಡು ಪ್ರತ್ಯೇಕ ಘಟನೆಗಳಲ್ಲಿ ಲೈಂಗಿಕ ಕ್ರಿಯೆಗಾಗಿ ಬಳಸಿಕೊಳ್ಳಲಾಗಿತ್ತು. 
SCROLL FOR NEXT