ಚೆನ್ನೈ: ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ ನೇತೃತ್ವದಲ್ಲಿ ಮಂಗಳವಾರ ಕರೆಯಲಾಗಿರುವ ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆಗೆ ತಡೆ ನೀಡಬೇಕು ಎಂದು ಪಕ್ಷದ ಬಂಡಾಯ ಶಾಕರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ್ದು, ಟಿಟಿವಿ ದಿನಕರನ್ ಬಣಕ್ಕೆ ಭಾರಿ ಹಿನ್ನಡೆಯಾಗಿದೆ
ಎಐಎಡಿಎಂಕೆ ಸಭೆಗೆ ತಡೆ ಕೋರಿ ಟಿಟಿವಿ ದಿನಕರನ್ ಬಣದ ಶಾಸಕ ಪಿ ವೆಟ್ರಿವೇಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಿವಿ ಕಾರ್ತಿಕೀಯನ್ ಅವರು ಇಂದು ವಜಾಗೊಳಿಸಿದ್ದಾರೆ. ಅಲ್ಲದೆ ನ್ಯಾಯಾಂಗ ಸಮಯ ವ್ಯರ್ಥ ಮಾಡಿದ ಬಂಡಾಯ ಶಾಸಕನಿಗೆ ಒಂದು ಲಕ್ಷ ರುಪಾಯಿ ದಂಡ ವಿಧಿಸಿದ್ದಾರೆ.
ಈ ಅರ್ಜಿ ವೈಯಕ್ತಿಕ ಹಿತಾಸಕ್ತಿ ಹೊಂದಿದ್ದು, ಅರ್ಜಿದಾರರು ಸಭೆಗೆ ಹೋಗಬಹುದು ಅಥವಾ ಆಹ್ವಾನ ತಿರಸ್ಕರಿಸಿ ಮನೆಯಲ್ಲಿಯೇ ಕುಳಿತುಕೊಳ್ಳಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ವಿ ಕೆ ಶಶಿಕಲಾ ಅವರನ್ನು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸುವುದಕ್ಕಾಗಿ ನಾಳೆ ಪಳನಿಸ್ವಾಮಿ ಬಣ ಪಕ್ಷದ ಜನರಲ್ ಕೌನ್ಸಿಲ್ ಸಭೆ ಕರೆದಿದ್ದು, ಇದೊಂದು ತಡೆಯುವುದಕ್ಕಾಗಿ ಶಶಿಕಲಾ ಆಪ್ತ ಹಾಗೂ ಉಚ್ಚಾಟಿತ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರು ಮಾಡಿದ ಎಲ್ಲಾ ಯತ್ನಗಳು ಈಗ ವಿಫಲವಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics