ದೇಶ

ಭಾರತೀಯ ವಾಯುಪಡೆಯ ಮಾರ್ಷಲ್ ಅರ್ಜನ್ ಸಿಂಗ್ ನಿಧನ

Lingaraj Badiger
ನವದೆಹಲಿ: 1965ರ ಭಾರತ- ಪಾಕಿಸ್ತಾನ ಯುದ್ಧದಲ್ಲಿ ಅಪ್ರತಿಮ ಸಾಧನೆ ಮೆರೆದ ಭಾರತೀಯ ವಾಯುಪಡೆಯ ಮಾರ್ಷಲ್‌ ಅರ್ಜನ್‌ ಸಿಂಗ್‌ ಅವರು ಇಂದು  ಹೃದಯಾಘಾತದಿಂದ ನಿಧನ  ಹೊಂದಿದ್ದಾರೆ.
ಭಾರತೀಯ ವಾಯುಪಡೆಯ ಮೊದಲ ಸರ್ವಶ್ರೇಷ್ಠ ಮಾರ್ಷಲ್‌ (first ever Marshal of the Indian Air Force), 98 ವರ್ಷದ ಅರ್ಜನ್‌ ಸಿಂಗ್‌ ಅವರನ್ನು ಇಂದು ಬೆಳಗ್ಗೆ ಸೇನಾ ಸಂಶೋಧನಾ ಮತ್ತು ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು
ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಾಯುಪಡೆ ಮುಖ್ಯಸ್ಥ ಬಿಎಸ್ ಧನೋಯಾ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಾರ್ಷಲ್ ಆರೋಗ್ಯ ಸ್ಥಿತಿ ವಿಚಾರಿಸಿದ್ದರು.
1965 ರ ಯುದ್ಧದಲ್ಲಿ ಭಾರತೀಯ ವಾಯುಪಡೆಯ ನೇತೃತ್ವ ವಹಿಸಿದ್ದ ಸಿಂಗ್‌ ಅವರು, ಪಾಕಿಸ್ತಾನದ ಮಿಲಿಟರಿ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಭಾರತೀಯ ವಾಯುಪಡೆಯ ಮೊದಲ ಮಾರ್ಷಲ್‌ ಎನ್ನುವ ಗೌರವ ಅರ್ಜನ್‌ ಸಿಂಗ್‌ ಅವರದಾಗಿದೆ.
2016ರಲ್ಲಿ ಪಶ್ಚಿಮ ಬಂಗಾಳದಲ್ಲಿರುವ ಪನಾಗರ್ ವಾಯುನೆಲೆಗೆ, ಅರ್ಜನ್ ಸಿಂಗ್  ಅವರ ಹೆಸರನ್ನು ಇಡಲಾಗಿತ್ತು. 2002ರಲ್ಲಿ ಸಿಂಗ್ ಅವರಿಗೆ ಫೈವ್ ಸ್ಟಾರ್ ಶ್ರೇಣಿಗೆ ಬಡ್ತಿ ನೀಡಲಾಗಿತ್ತು.
SCROLL FOR NEXT