ಸರ್ದಾರ್ ಸರೋವರ ಅಣೆಕಟ್ಟು (ಸಂಗ್ರಹ ಚಿತ್ರ) 
ದೇಶ

ದೇಶಕ್ಕೆ ಪ್ರಧಾನಿ ಮೋದಿ ಬರ್ತ್ ಡೇ ಗಿಫ್ಟ್: ವಿಶ್ವದ ಎರಡನೇ ಅತೀ ದೊಡ್ಡ ಡ್ಯಾಮ್ ಲೋಕಾರ್ಪಣೆಗೆ ಸಜ್ಜು!

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಭಾನುವಾರ ದೇಶಕ್ಕೆ ಕೇಂದ್ರ ಸರ್ಕಾರ ಉಡುಗೊರೆಯೊಂದನ್ನು ನೀಡುತ್ತಿದ್ದು, ವಿಶ್ವದ ಎರಡನೇ ಅತೀ ದೊಡ್ಡ ಡ್ಯಾಮ್ ಎಂಬ ಕೀರ್ತಿ ಭಾಜನವಾಗಿರುವ ಸರ್ದಾರ್ ಸರೋವರ ಅಣೆಕಟ್ಟನ್ನು ಲೋಕಾರ್ಪಣೆ ಮಾಡಲಾಗುತ್ತಿದೆ.

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಭಾನುವಾರ ದೇಶಕ್ಕೆ ಕೇಂದ್ರ ಸರ್ಕಾರ ಉಡುಗೊರೆಯೊಂದನ್ನು ನೀಡುತ್ತಿದ್ದು, ವಿಶ್ವದ ಎರಡನೇ ಅತೀ ದೊಡ್ಡ ಡ್ಯಾಮ್ ಎಂಬ ಕೀರ್ತಿ ಭಾಜನವಾಗಿರುವ ಸರ್ದಾರ್  ಸರೋವರ ಅಣೆಕಟ್ಟನ್ನು ಲೋಕಾರ್ಪಣೆ ಮಾಡಲಾಗುತ್ತಿದೆ.
ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂರವರು ಸರ್ದಾರ್ ಸರೋವರ ಅಣೆಕಟ್ಟು ಯೋಜನೆಗೆ ಶಿಲಾನ್ಯಾಸ ಮಾಡಿ ಜೂನ್ 17ಕ್ಕೆ 56 ವರ್ಷಗಳು ಪೂರ್ಣಗೊಂಡಿದ್ದು, ಈ ಮ್ಯಾರಥಾನ್ ಕಾಮಗಾರಿ ಇಂದೀಗ  ಪೂರ್ಣಗೊಂಡು ಡ್ಯಾಮ್ ಲೋಕಾರ್ಪಣೆಗೆ ಸಜ್ಜಾಗಿದೆ.

2014ರ ಡಿಸೆಂಬರ್‌ನಲ್ಲೇ ಮುಗಿಯಬೇಕಿದ್ದ ಕಾಮಗಾರಿಯನ್ನು ಪ್ರಧಾನಿ ಕಚೇರಿ ವಿಳಂಬ ಮಾಡುತ್ತಾ ಬಂದು, ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಇದೀಗ ಉದ್ಘಾಟನೆ ಮಾಡಲಾಗುತ್ತಿದೆ. ಈ ಹಿಂದೆ  ಇದ್ದ ಅಣೆಕಟ್ಟಿನ ಎತ್ತರವನ್ನು ಇದೀಗ ಹೆಚ್ಚಿಸಲಾಗಿದ್ದು, ಅಣೆಕಟ್ಟಿನ ಎತ್ತರವನ್ನು 138. 68 ಮೀಟರ್‌ಗೆ ಹೆಚ್ಚಿಸಲಾಗಿದೆ. ಇದನ್ನು ಇಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಹುಟ್ಟುಹಬ್ಬದ ಉಡುಗೊರೆಯಾಗಿ ರಾಷ್ಟ್ರಕ್ಕೆ  ಸಮರ್ಪಿಸುವರು.

ಅಣೆಕಟ್ಟಿನ ಎತ್ತರವನ್ನು 138.68 ಅಡಿಗೆ ಹೆಚ್ಚಿಸಿರುವುದರಿಂದ ಇದರಲ್ಲಿ ಬಳಕೆ ಮಾಡಬಹುದಾದ ನೀರಿನ ಪ್ರಮಾಣ 4.73 ಎಕರೆ ಅಡಿ (ಎಂಎಎಫ್)ಯಷ್ಟು ಆಗಲಿದ್ದು, ಇದು ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಹಾಗೂ  ಮಹಾರಾಷ್ಟ್ರಗಳಿಗೆ ನೀರುಣಿಸಲಿದೆ. ಈ ಯೋಜನೆಯಿಂದ ಸುಮಾರು 10 ಲಕ್ಷ ಕೃಷಿಕರ ಹೊಲಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ನಾಲ್ಕು ಕೋಟಿ ಮಂದಿಗೆ ಕುಡಿಯುವ ನೀರು ಪೂರೈಸಲಿದೆ. 1961ರ ಏಪ್ರಿಲ್ 5ರಂದು  ಜವಾಹರಲಾಲ್ ನೆಹರೂ ಈ ಯೋಜನೆಗೆ ನರ್ಮದಾ ಜಿಲ್ಲೆಯ ಕೆವಾದಿಯಾ ಗ್ರಾಮದಲ್ಲಿ ಶಿಲಾನ್ಯಾಸ ಮಾಡಿದ್ದರು. ಇದೀಗ ಮೋದಿ ಅದೇ ಸ್ಥಳದಿಂದ ಅದನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಡ್ಯಾಮ್ ಲೋಕಾರ್ಪಣೆ ನಿಮಿತ್ತ ಸಮಾರಂಭಕ್ಕಾಗಿ ಶನಿವಾರ ರಾತ್ರಿಯೇ ಆಗಮಿಸಿರುವ ಪ್ರಧಾನಿ ಮೋದಿ ಗಾಂಧಿನಗರದ ರಾಜಭವನದಲ್ಲಿ ತಂಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT