ಪಣಜಿ: ಪ್ಲಾಸ್ಟಿಕ್ ಕಪ್, ತಟ್ಟೆಗಳನ್ನು ಬಳಕೆ ಮಾಡದಿರಲು ಗೋವಾ ಜನತೆಗೆ ಸಿಎಂ ಮನೋಹರ್ ಪರಿಕ್ಕರ್ ಕರೆ ನೀಡಿದ್ದಾರೆ.
ಸೆ.17 ರಂದು ಪ್ರಧಾನಿ ನರೇಂದ್ರ ಮೋದಿ ಅವರ 67 ನೇ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಸೇವಾ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಮನೋಹರ್ ಪರಿಕ್ಕರ್, ತಾವು ಸಹ ಪ್ಲಾಸ್ಟಿಕ್ ನಿಂದ ಉಂಟಾಗುವ ಮಾಲಿನ್ಯವನ್ನು ತಡೆಗಟ್ಟಲು ಕೈ ಜೋಡಿಸಿದ್ದು, ಪ್ಲಾಸ್ಟಿಕ್ ನಲ್ಲಿ ಸುತ್ತಿರುವ ಹೂವು, ಬೊಕೆಗಳನ್ನು ಸ್ವೀಕಾರಿಸುತ್ತಿಲ್ಲ ಎಂದು ಹೇಳಿದ್ದಾರೆ. ಮಹಿಳೆಯರಿಗೂ ಸಲಹೆ ನೀಡಿರುವ ಪರಿಕ್ಕರ್, ಆಹಾರವನ್ನು ಅಗತ್ಯಕ್ಕಿಂತ ಹೆಚ್ಚು ತಯಾರಿಸಿ ವ್ಯರ್ಥಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.
ಇದೇ ವೇಳೆ ಸ್ವಚ್ಛತೆಯ ಬಗ್ಗೆಯೂ ಪರಿಕ್ಕರ್ ಮಾತನಾಡಿದ್ದು, ಸ್ವಚ್ಛತೆ ಎಂಬುದು ಮನೆಯಿಂದಲೇ ಪ್ರಾರಂಭವಾಗಬೇಕಾದ ಜಾಗೃತಿ ಎಂದು ಅಭಿಪ್ರಾಯಪಟ್ಟಿದ್ದಾರೆ.