ದೇಶ

ಅಸ್ಸಾಂ: ದೋಣಿ ಮುಳುಗಿ 10 ಮಂದಿ ದುರ್ಮರಣ

Shilpa D
ಗೋಲಾಪಾರಾ: ದೋಣಿ ಮುಳುಗಿದ ಪರಣಾಮ 10 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಅಸ್ಸಾಂನ ಗೋಲ್ ಪಾರಾದಲ್ಲಿ ನಡೆದಿದೆ ಎಂದು ಜಿಲ್ಲಾ ಆಡಳಿತಾಧಿಕಾರಿ ತಿಳಿಸಿದ್ದಾರೆ.
ಗೋಲ್ ಪಾರಾ ಜಿಲ್ಲೆಯ ಸುಮಾರು 50 ಮಂದಿ ನಾಲ್ಕು ಸಣ್ಣ ದೋಣಿಗಳಲ್ಲಿ ದೋಣಿ ರೇಸ್ ನೋಡಿಕೊಂಡು ವಾಪಸ್ ಮನೆಗೆ ಬರುತ್ತಿದ್ದರು. ಸಾಬೋನ್ ನದಿಯ ಜೋರಿ ಬೀಲ್ ಎಂಬ ಪ್ರದೇಶದಲ್ಲಿ ಉಂಟಾದ ಬಿರುಗಾಳಿ ಹಿನ್ನೆಲೆಯಲ್ಲಿ ನಿನ್ನೆ ಸಂಜೆ, ದೋಣಿ ಮುಳುಗಿದೆ, ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನಿನ್ನೆ ರಾತ್ರಿ 9 ಮಂದಿ ಶವಗಳನ್ನು ಹೊರೆತೆಗೆಯಲಾಗಿತ್ತು, ಇಂದು ಮತ್ತೊಬ್ಬನ ಶವ ದೊರೆತಿದೆ. ಇನ್ನು ಹಲವರು ಶವಗಳು ನಾಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಎಸ್ ಡಿ ಆರ್ ಪಿ ತಂಡ ಸ್ಥಳಕ್ಕಾಗಿಮಿಸಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. 
SCROLL FOR NEXT