ದೇಶ

ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ: ಮನೀಶ್ ತಿವಾರಿ ಬೆಂಬಲಕ್ಕೆ ನಿಂತ ಕಾಂಗ್ರೆಸ್

Manjula VN
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಅಶ್ಲೀಲ ಪದ ಬಳಸಿ ಟೀಕೆಗಳಿಗೆಗಳಿಗೆ ಗುರಿಯಾಗಿರುವ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿಯವರ ಬೆಂಬಲಕ್ಕೆ ಇದೀಗ ಕಾಂಗ್ರೆಸ್ ಬಂದಿದ್ದು, ದೇಶದಲ್ಲಿರುವ ಪ್ರತಿಯೊಬ್ಬರಿಗೂ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕಿದೆ ಎಂದು ಹೇಳಿದೆ. 
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಪಿ.ಸಿ. ಚಾಕೋ ಅವರು, ಅಭಿಪ್ರಾಯಗಳನ್ನು ವ್ಯಕ್ತಪಡಿಸುವಲ್ಲಿ ಪ್ರತೀಯೊಬ್ಬರಿಗೂ ಸ್ವಾತಂತ್ರ್ಯವಿದೆ. ಆಕ್ಷೇಪಾರ್ಹ ಭಾಷೆ ಬಳಸವ ಮೂಲಕ ಯಾರನ್ನು ಬೇಕಾದರೂ ಮೌನಗೊಳಿಸಬಹುದು ಎಂಬುದು ಇದರ ಅರ್ಥವಲ್ಲ ಎಂದು ಹೇಳಿದ್ದಾರೆ. 
ಸಂಘ ಪರಿವಾರಗಳು ಕೋಮುವಾದವನ್ನು ಹರಡುತ್ತಿದ್ದು, ಇದು ದೇಶದ ಕೋಮು ಸಾಮರಸ್ಯ ಹಾಗೂ ಶಾಂತಿಯನ್ನು ಹಾಳು ಮಾಡುತ್ತಿದೆ. ಇದನ್ನು ಸ್ಪಷ್ಟವಾಗಿ ಹೇಳಬೇಕಿದೆ. ತಿವಾರಿಯವರ ಹೇಳಿಕೆಯಲ್ಲಿ ಇದಾವುದು ಕಾಣಿಸಿಲ್ಲ. ತಿವಾರಿಯವರೂ ಎಂದಿಗೂ ಆಕ್ಷೇಪಾರ್ಹ ಭಾಷೆಯನ್ನು ಬಳಸಿ ಮಾತನಾಡಿಲ್ಲ ಎಂದು ತಿಳಿಸಿದ್ದಾರೆ. 
ನಿನ್ನೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅಶ್ಲೀಲ ಪದಗಳಿಂದ ನಿಂದಿಸಿ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿಯವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದರು. ಭಕ್ತರನ್ನು (ಅನುಯಾಯಿಗಳನ್ನು) ಚೂ...ಗಳನ್ನಾಗಿ (ಮೂರ್ಖರನ್ನಾಗಿ) ಮತ್ತು ಮೂರ್ಖರನ್ನು ಭಕ್ತರನ್ನಾಗಿ... ಮಾಡುವುದು ಎಂದರೆ ಇದೇ... ಮೋದಿಯವರ ಡಿಎನ್ಎಯಲ್ಲೇ ದೇಶಭಕ್ತಿ ತುಂಬಿದೆ. ಗಾಂಧೀಜಿಯವರೂ ಕೂಡ ಮೋದಿಯವರಿಗೆ ದೇಶಭಕ್ತಿಯನ್ನು ಬೋಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ಇದೀಗ ಭಾರೀ ಖಂಡನೆಗಳು ವ್ಯಕ್ತವಾಗತೊಡಗಿವೆ. 
SCROLL FOR NEXT