ದೇಶ

ಮುಂಬೈ: ಮ್ಯಾನ್ ಹೋಲ್ ತೆರೆದು ವೈದ್ಯನ ಸಾವಿಗೆ ಕಾರಣವಾದ ನಾಲ್ವರ ಬಂಧನ

Lingaraj Badiger
ಮುಂಬೈ: ಸಾವಿನ ಗುಂಡಿ(ಮ್ಯಾನ್ ಹೋಲ್) ತೆರೆದು ಹಿರಿಯ ವೈದ್ಯರೊಬ್ಬರ ಸಾವಿಗೆ ಕಾರಣವಾದ ಆರೋಪದ ಮೇಲೆ ನಾಲ್ವರು ಯುವಕರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 29ರಂದು ಭಾರಿ ಮಳೆಯಿಂದಾಗಿ ನೀರು ತುಂಬಿದ ರಸ್ತೆಯಲ್ಲಿದ್ದ ಮ್ಯಾನ್ ಹೋಲ್ ಗೆ ಬಿದ್ದು ಹಿರಿಯ ವೈದ್ಯ ದೀಪಕ್ ಅಮರಾಪುರಕರ್ ಮೃತಪಟ್ಟಿದ್ದರು. ಈ ಸಂಬಂಧ ಸಿದ್ದೇಶ್ ಅಶೋವ್ ಭಾಲೆಕರ್(25), ರಾಕೇಶ್ ಜನಾರ್ದ್ ಕದಂ(38), ನಿಲೇಶ್ ಜಾನರ್ದನ್ ಕದಂ(33) ಹಾಗೂ ದಿನಾರ್ ರಘುನಾಥ್ ಪವಾರ್(36) ಎಂಬುವವರನ್ನು ಕಳೆದ ಶನಿವಾರ ಸಂಜೆ ಬಂಧಿಸಿರುವುದಾಗಿ ಸಹಾಯಕ ಪೊಲೀಸ್ ಆಯುಕ್ತ ಸುನಿಲ್ ದೇಶಮುಖ್ ಅವರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಎಲ್ಫಿನಸ್ಟೋನ್  ರಸ್ತೆ ನಿವಾಸಿಗಳಾಗಿದ್ದು, ನಾಲ್ವರ ವಿರುದ್ಧ ಮಾನವ ಹತ್ಯೆ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ನಾಲ್ವರು ಆರೋಪಿಗಳು ಆಗಸ್ಟ್ 29ರಂದು ಭಾರಿ ಮಳೆಯಿಂದಾಗಿ ತಮ್ಮ ಮನಗೆ ನೀರು ಬರುತ್ತಿರುವುದನ್ನು ತಪ್ಪಿಸುವುದಕ್ಕಾಗಿ ಕನಿಷ್ಠ ನಾಲ್ಕು ಸಾವಿನ ಗುಂಡಿಗಳನ್ನು ತೆರೆದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 29ರಂದು ಎಲ್ಫಿಸ್ಟೋನ್ ರಸ್ತೆಯಲ್ಲಿ ಭಾರಿ ನೀರು ತುಂಬಿದ್ದರಿಂದ ಬಾಂಬೆ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ಇಲಾಖೆ ಮುಖ್ಯಸ್ಥ ಡಾ.ಅಮರಾಪುರಕರ್ ಅವರು ನಡೆದುಕೊಂಡು ಹೋಗಿ, ಮ್ಯಾನ್ ಹೋಲ್ ಗೆ ಬಿದ್ದಿದ್ದರು.
SCROLL FOR NEXT