ದೇಶ

ರೋಹಿಂಗ್ಯಾ ಮುಸ್ಲಿಮರ ಅಕ್ರಮ ಪ್ರವೇಶ ತಡೆಯಲು ಗಡಿಯಲ್ಲಿ ಬಿಗಿ ಭದ್ರತೆ

Lingaraj Badiger
ಐಝವಾಲ್: ರೋಹಿಂಗ್ಯಾ ಮುಸ್ಲಿಂ ಉಗ್ರರು ಮತ್ತು ನಿರಾಶ್ರಿತರು ಅಕ್ರಮವಾಗಿ ಭಾರತ ಪ್ರವೇಶಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಸ್ಸಾಂ ರೈಫಲ್ಸ್ ಮಿಜೋರಾಂ-ಅರ್ಕಾನ್(ಮಯನ್ಮಾರ್) ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಿದೆ.
ಮಯನ್ಮಾರ್ ಗಡಿ ಪರಿಸ್ಥಿತಿ ಅವಲೋಕಿಸುವುದಕ್ಕಾಗಿ ಇಂದು ಮಿಜೋರಾಂ ಪೊಲೀಸರು, ಅರೆಸೇನಾಪಡೆ ಸಿಬ್ಬಂದಿ ಹಾಗೂ ಗುಪ್ತಚರ ಅಧಿಕಾರಿಗಳು ಹಲವು ಬಾರಿ ಸಭೆ ನಡೆಸಿದ್ದಾರೆ ಎಂದು ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದುವರೆಗೆ ಯಾವುದೇ ಒಬ್ಬ ರೋಹಿಂಗ್ಯಾ ಮುಸ್ಲಿಂ ವ್ಯಕ್ತಿ ಮಿಜೋರಾಂ ಪ್ರವೇಶಿಸಿಲ್ಲ ಎಂದು ಅವರು ಹೇಳಿದ್ದಾರೆ. ಮಿಜೋರಾಂ ಮಯನ್ಮಾರ್ ನೊಂದಿಗೆ 404 ಕಿ.ಮೀ.ಅಂತರಾಷ್ಟ್ರೀಯ ಗಡಿಯನ್ನು ಹೊಂದಿದೆ.
ಈ ಮಧ್ಯೆ, ಮಯನ್ಮಾರ್ ನ ಅರ್ಕಾನ್ ನ ಸುಮಾರು 170 ನಿರಾಶ್ರಿತರು ಪ್ರಮುಖವಾಗಿ ಕ್ರಿಶ್ಚಿಯನ್ನರು ಇತ್ತೀಚಿಗೆ ಮಿಜೋರಾಂ ಪ್ರವೇಶಿಸಿದ್ದು, ರಾಜ್ಯದಲ್ಲಿ ದಕ್ಷಿಣ ಭಾಗದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
SCROLL FOR NEXT