ದೇಶ

ಕಪ್ಪುಹಣದ ಕುರಿತು ಯುಪಿಎ ಅವಧಿಯ ವರದಿಗಳ ಪರಿಶೀಲನೆ: ಕೇಂದ್ರ ಸರ್ಕಾರ

Srinivas Rao BV
ನವದೆಹಲಿ: ಭಾರತೀಯರು ಹೊಂದಿರುವ ಕಪ್ಪುಹಣದ ಪ್ರಾಮಾಣದ ಕುರಿತು ಯುಪಿಎ ಅವಧಿಯ ವರದಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 
ಮೂರು ವರ್ಷಗಳ ಹಿಂದೆ ಸಲ್ಲಿಕೆ ಮಾಡಲಾಗಿರುವ ವರದಿಗಳು ಪರಿಶೀಲನೆಯಲ್ಲಿದೆ ಎಂದು ಆರ್ ಟಿಐ ಪ್ರಶ್ನೆಗೆ ಹಣಕಾಸು ಸಚಿವಾಲಯ ಉತ್ತರಿಸಿದೆ. ಪರಿಶೀಲನೆಯಲ್ಲಿರುವ ವರದಿಯ ಮಾಹಿತಿಯನ್ನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದ್ದು, ಇನ್ನಷ್ಟೇ ಸಂಸತ್ ನಲ್ಲಿ ಹಾಜರುಪಡಿಸಬೇಕಿದೆ ಎಂದು ಹೇಳಿದೆ. 
ದೆಹಲಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಆಂಡ್ ಪಾಲಿಸಿ (ಎನ್ಐಪಿಎಫ್ ಪಿ) ಹಾಗೂ ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕಾನಾಮಿಕ್ ರಿಸರ್ಚ್ (ಎನ್ ಸಿಎಇಆರ್) ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫೈನಾನ್ಶಿಯಲ್ ಮ್ಯಾನೇಜ್ ಮೆಂಟ್ ಸಂಸ್ಥೆಗಳು ಅಧ್ಯಯನ ನಡೆಸಿ 2013 ರ ಡಿಸೆಂಬರ್ 30, 2014 ರ ಜುಲೈ 18, 2014 ರ ಆಗಸ್ಟ್ 21 ರಂದು ವರದಿ ನೀಡಿದ್ದವು. 
SCROLL FOR NEXT