ಕೋಲ್ಕತ್ತಾ ದಲ್ಲಿ ದುರ್ಗಾ ಪೂಜೆ 
ದೇಶ

ದುರ್ಗಾ ವಿಗ್ರಹದ ಮೆರವಣಿಗೆ ಮೇಲೆ ಮಮತಾ ಸರಕಾರದ ನಿರ್ಬಂಧಕ್ಕೆ ಕೋಲ್ಕತ್ತಾ ಹೈ ಕೋರ್ಟ್ ತಡೆ

ದುರ್ಗಾ ಮೂರ್ತಿಗಳ ಎತ್ತರ, ಅದರ ಮೆರವಣಿಗೆ ಕುರಿತಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊರಡಿಸಿದ್ದ ನಿರ್ಬಂಧಗಳಿಗೆ ಕೋಲ್ಕತ್ತಾ ಹೈ ಕೋರ್ಟ್ ಇಂದು ತಡೆ ನೀಡಿದೆ.

ಕೋಲ್ಕತ್ತಾ : ದುರ್ಗಾ ಮೂರ್ತಿಗಳ ಎತ್ತರ, ಅದರ ಮೆರವಣಿಗೆ ಕುರಿತಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊರಡಿಸಿದ್ದ ನಿರ್ಬಂಧಗಳಿಗೆ ಕೋಲ್ಕತ್ತಾ ಹೈ ಕೋರ್ಟ್ ಇಂದು ತಡೆ ನೀಡಿದೆ.
ದುರ್ಗಾದೇವಿ ಮೆರವಣಿಗೆ ಮತ್ತು ಮೊಹರಂ ಮೆರವಣಿಗೆಗಳಿಗೆ ಪ್ರತ್ಯೇಕ ಮಾರ್ಗಗಳನ್ನು ನೀಡುವಂತೆ ನ್ಯಾಯಾಲಯವು ಸರ್ಕಾರಕ್ಕೆ ಕೇಳಿದೆ.
ಪಶ್ಚಿಮ ಬಂಗಾಳ ಸರ್ಕಾರವು ಅ.1ರಂದು ಮೊಹರಂ ಇದ್ದ ಕಾರಣ ಸೆ.30ರ ರಾತ್ರಿ ಹತ್ತರ ಬಳಿಕ ಯಾವ ದುರ್ಗಾದೇವಿ ವಿಗ್ರಹವನ್ನೂ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುವಂತಿಲ್ಲ ಎಂದು ಆದೇಶಿಸಿತ್ತು.
ಸಾವಿರಾರು ಜನರು ಈ ಮೆರವಣಿಗೆ ಸಮಯದಲ್ಲಿ ರಸ್ತೆಯಲ್ಲಿ ಸೇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈ ನಿರ್ಬಂಧಗಳು ಅನಿವಾರ್ಯ ಎಂಡು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಅಡ್ಡಿಪಡಿಸುವಿಕೆಯ ಕಲ್ಪನೆಯ ಆಧಾರದ ಮೇಲೆ ಪ್ರಜೆಗಳು ಧರ್ಮವನ್ನು ಆಚರಿಸುವ ಹಕ್ಕನ್ನು ತಡೆಯೊಡ್ಡಲು ಬರುವುದಿಲ್ಲ ಎಂದಿರುವ ನ್ಯಾಯಾಲಯ  ಅವರನ್ನು (ಹಿಂದೂಗಳು ಮತ್ತು ಮುಸ್ಲಿಮರು) ಸಾಮರಸ್ಯದಿಂದ ಜೀವಿಸುವಂತೆ ಹೇಳಿದೆ. ಅವರ ನಡುವೆ ಯಾವ ಗೋಡೆಗಳಿಲ್ಲ ಎಂದು  ಮುಖ್ಯ ನ್ಯಾಯಮೂರ್ತಿ ರಾಕೇಶ್ ತಿವಾರಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!