ಮಮತಾ ಬ್ಯಾನರ್ಜಿ 
ದೇಶ

ಯಾರಾದರೂ ನನ್ನ ಕುತ್ತಿಗೆ ಕತ್ತರಿಸಬಹುದು, ಆದರೆ ನಾನು ಏನು ಮಾಡಬೇಕು ಎಂಬುದನ್ನು ಹೇಳಬೇಡಿ: ಮಮತಾ ಪ್ರತಿಕ್ರಿಯೆ

ದುರ್ಗಾ ದೇವಿ ವಿಗ್ರಹದ ಮೆರವಣಿಗೆ ಮೇಲೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರ ನಿರ್ಬಂಧಕ್ಕೆ ಕೋಲ್ಕತ್ತಾ ಹೈ ಕೋರ್ಟ್ ತಡೆ ನೀಡಿದ ಹಿನ್ನಲೆಯಲ್ಲಿ...

ಕೋಲ್ಕತ್ತಾ: ದುರ್ಗಾ ದೇವಿ ವಿಗ್ರಹದ ಮೆರವಣಿಗೆ ಮೇಲೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರ ನಿರ್ಬಂಧಕ್ಕೆ ಕೋಲ್ಕತ್ತಾ ಹೈ ಕೋರ್ಟ್ ತಡೆ ನೀಡಿದ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಮಮತಾ ಅವರು ಯಾರದರೂ ನನ್ನ ಕುತ್ತಿಗೆ ಕತ್ತರಿಸಬಹುದು, ಆದರೆ ನಾನು ಏನು ಮಾಡಬೇಕು ಎಂಬುದನ್ನು ಉಪದೇಶಿಸಬಾರದು ಎಂದು ಹೇಳಿದ್ದಾರೆ. 
ದುರ್ಗಾ ಮೆರವಣಿಗೆ ಸರ್ಕಾರದ ನಿರ್ಬಂಧಕ್ಕೆ ತಡೆ ನೀಡಿದ ಹಿನ್ನೆಲೆಯಲ್ಲಿ ಕೋಲ್ಕತ್ತಾ ಹೈಕೋರ್ಟ್‌ ವಿರುದ್ಧ ಮಮತಾ ಬ್ಯಾನರ್ಜಿ ಅವರು ಕಿಡಿಕಾರಿದ್ದಾರೆ. ಇನ್ನು ದುರ್ಗಾ ಮಾತೆಯ ವಿಗ್ರಹ ಮೆರವಣಿಗೆ ಹಾಗೂ ಮೊಹರಂ ಮೆರವಣಿಗೆಗಳು ನಡೆಯುವುದರಿಂದ ನಾನು ರಾಜ್ಯದಲ್ಲಿ ಶಾಂತಿ ಕಾಪಾಡುವ ಸಲುವಾಗಿ ಕೆಲ ನಿರ್ಬಂಧನೆಗಳನ್ನು ತಂದಿದ್ದೇನೆ. ಆದರೆ ಹೈ ಕೋರ್ಟ್ ನ ತಡೆಯಿಂದಾಗಿ ಮೆರವಣಿಗೆ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆದರೆ ಅದರ ಜವಾಬ್ದಾರಿ ಯಾರೂ ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ. 
ಪಶ್ಚಿಮ ಬಂಗಾಳ ಸರ್ಕಾರ ಹಾಗೂ ನಮ್ಮ ವಿರುದ್ಧ ಪಿತ್ತೂರಿ ನಡೆಸಲಾಗಿದ್ದು ರಾಜ್ಯದಲ್ಲಿ ಅಶಾಂತಿ ಕದಡಲು ಹೊಂಚು ಹಾಕಿದ್ದಾರೆ ಎಂದು ಮಮತಾ ಬ್ಯಾನರ್ಜಿ ಅವರು ಆರೋಪಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಅಡ್ಡಿಪಡಿಸುವಿಕೆಯ ಕಲ್ಪನೆಯ ಆಧಾರದ ಮೇಲೆ ಪ್ರಜೆಗಳು ಧರ್ಮವನ್ನು ಆಚರಿಸುವ ಹಕ್ಕನ್ನು ತಡೆಯೊಡ್ಡಲು ಬರುವುದಿಲ್ಲ ಎಂದಿರುವ ಮುಖ್ಯ ನ್ಯಾಯಮೂರ್ತಿ ರಾಕೇಶ್ ತಿವಾರಿ ಅವರನ್ನು (ಹಿಂದೂಗಳು ಮತ್ತು ಮುಸ್ಲಿಮರು) ಸಾಮರಸ್ಯದಿಂದ ಜೀವಿಸುತ್ತಿದ್ದ ಅವರು ನಡುವೆ ಯಾವ ಗೋಡೆಗಳಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!