ದೇಶ

ತಂದೆಯ ಭೇಟಿಗಾಗಿ ಮುಂಬೈ ಗೆ ಬಂದಿದ್ದ ದಾವೂದ್ ಪತ್ನಿ : ಇಕ್ಬಾಲ್ ಕಸ್ಕರ್ ಮಾಹಿತಿ

Srinivas Rao BV
ಮುಂಬೈ: ಬಂಧನಕ್ಕೊಳಗಾಗಿರುವ ಇಕ್ಬಾಲ್ ಕಸ್ಕರ್ ದಾವೂದ್ ಇಬ್ರಾಹಿಂ ಬಗ್ಗೆ ದಿನಕ್ಕೊಂದು ಮಹತ್ವದ ಮಾಹಿತಿ ನೀಡುತ್ತಿದ್ದು, ಮೋದಿ ಪ್ರಧಾನಿಯಾದ ಬಳಿಕ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ನಾಲ್ಕು ಬಾರಿ ಮನೆ ಬದಲಿಸಿದ್ದಾನೆ ಎಂಬ ಮಾಹಿತಿ ನೀಡಿದ್ದ ಬೆನ್ನಲ್ಲೇ ದಾವೂದ್ ಪತ್ನಿ ಆಕೆಯ ತಂದೆಯನ್ನು ಭೇಟಿಮಾಡಲು ಕಳೆದ ವರ್ಷ ಮುಂಬೈಗೆ ಬಂದಿದ್ದರು ಎಂಬ ಮಾಹಿತಿ ನೀಡಿದ್ದಾನೆ. 
ಥಾಣೆ ಪೊಲೀಸರಿಗೆ ದಾವೂದ್ ಇಬ್ರಾಹಿಂ ಬಗ್ಗೆ ಮಾಹಿತಿ ನೀಡಿರುವ ಕಸ್ಕರ್ ಈ ವಿಷಯವನ್ನು ಬಹಿರಂಗಪಡಿಸಿದ್ದು, ತಮ್ಮೊಂದಿಗೆ ತಂದೆಯನ್ನು ಭೇಟಿ ಮಾಡುವಂತೆ ದಾವೂದ್ ಇಬ್ರಾಹಿಂ ಪತ್ನಿಗೆ ಕಳೆದ ವರ್ಷ ಹೇಳಿದ್ದೆ ಅದರಂತೆಯೇ ಅವರು ಕಳೆದ ವರ್ಷ ಮುಂಬೈಗೆ ಭೇಟಿ ನೀಡಿದ್ದರು ಎಂದು ಕಸ್ಕರ್ ಹೇಳಿದ್ದಾನೆ.
SCROLL FOR NEXT