ಸಾಂದರ್ಭಿಕ ಚಿತ್ರ 
ದೇಶ

ದೆಹಲಿ: ಸೆಕ್ಸ್‌ ಗಾಗಿ ಪೀಡಿಸುತ್ತಿದ್ದ ತನ್ನ ಯಜಮಾನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಬಾಲಕ

16 ವರ್ಷದ ಬಾಲಕನೊಬ್ಬ ತನಗೆ ಕೆಲಸ ನೀಡಿದ್ದ ಯಜಮಾನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿ ಪೊಲೀಸರಿಗೆ ಶರಣಾಗಿರುವ....

ನವದೆಹಲಿ: 16 ವರ್ಷದ ಬಾಲಕನೊಬ್ಬ ತನಗೆ ಕೆಲಸ ನೀಡಿದ್ದ ಯಜಮಾನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ಕಳೆದ ಬುಧವಾರ ರಾಷ್ಟ್ರ ರಾಜಧಾನಿ ದೆಹಲಿಯ ಲಜ್ ಪತ್ ನಗರದಲ್ಲಿ ನಡೆದಿದೆ. 
ಅಳುತ್ತಾ ಸಹೀಬಾಬಾದ್‌ ಪೊಲೀಸ್‌ ಠಾಣೆಗೆ ಬಂದು ಶರಣಾದ ಬಾಲ, ನಿರಂತರವಾಗಿ ಸೆಕ್ಸ್‌ ಗಾಗಿ ಪೀಡಿಸುತ್ತಿದ್ದ ತನ್ನ ಮನೆ ಒಡತಿಯನ್ನು ಹತ್ಯೆ ಮಾಡಿರುವುದಾಗಿ ಬಾಲಕ ಹೇಳಿಕೊಂಡಿದ್ದಾನೆ. ಕೂಡಲೇ ಪೊಲೀಸರು ಬಾಲಕನ ಸಮೇತ ನಿವಾಸಕ್ಕೆ ದೌಡಾಯಿಸಿದ್ದು ,ರಕ್ತದ ಮಡುವಿನಲ್ಲಿ  ಬಿದ್ದಿದ್ದ ಶವವನ್ನು ಕಂಡಿದ್ದಾರೆ. ಈ ವೇಳೆ ಪಕ್ಕದಲ್ಲೇ ಎರಡು ವರ್ಷದ ಹೆಣ್ಣು ಮಗು ನಿದ್ರೆಯಲ್ಲಿತ್ತು ಎನ್ನಲಾಗಿದೆ. ಘಟನೆ ನಡೆಯುವ ವೇಳೆ ಮಹಿಳೆಯ ಪತಿ ಕೆಲಸಕ್ಕೆ ತೆರಳಿದ್ದ ಎಂದು ತಿಳಿದುಬಂದಿದೆ. 
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹತ್ಯೆಯ ಬಳಿಕ ರಕ್ತ ಸಿಕ್ತ ಕೈಗಳ ಸಮೇತ ಬಾಲಕ ಠಾಣೆಗೆ ಬಂದು ಶರಣಾಗಿರುವುದಾಗಿ ತಿಳಿಸಿದ್ದಾರೆ. 
ನಿರಂತರ ಸೆಕ್ಸ್‌ ಬೇಡಿಕೆಯಿಂದ ದಿಕ್ಕು ತೋಚದಂತಾಗಿದ್ದ ಬಾಲಕ ಒಡತಿಯನ್ನು ಕೊಲೆ ಮಾಡಲು ಸಿದ್ಧವಾಗಿ, ಆಕೆ ಟಿವಿ ನೋಡುತ್ತಿದ್ದ ವೇಳೆ ಸಮಯ ಸಾಧಿಸಿ ಬರ್ಬರವಾಗಿ ಕತ್ತು ಸೀಳಿ  ಕೊಲೆಗೈದಿದ್ದಾನೆ.
ಆರೋಪಿ ಬಾಲಕ ನಿರುದ್ಯೋಗಿಯಾಗಿ ಕೆಲಸವಿಲ್ಲದೆ ಅಲೆಯುತ್ತಿದ್ದಾಗ ಆತನನ್ನು ಕರೆತಂದು ಮನೆಯಲ್ಲಿ ಕೆಲಸ ನೀಡಿ ಮನೆಗೆಲಸದಲ್ಲಿ ಸಹಾಯ ಪಡೆಯುತ್ತಿದ್ದರು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್