7 ಬ್ಯಾಂಕ್ ಗಳ ಡೆಬಿಟ್ ಕಾರ್ಡ್ ಪೇಮೆಂಟ್ ಗೇಟ್ ವೇ ಗೆ ಐಆರ್ ಸಿಟಿಸಿ ನಿಷೇಧ 
ದೇಶ

7 ಬ್ಯಾಂಕ್ ಗಳ ಡೆಬಿಟ್ ಕಾರ್ಡ್ ಪೇಮೆಂಟ್ ಗೇಟ್ ವೇ ಗೆ ಐಆರ್ ಸಿಟಿಸಿ ನಿಷೇಧ

ಕಾರ್ಡ್ ಪೇಮೆಂಟ್ ಮಾಡುವ ವೇಳೆ ವಿಧಿಸಲಾಗುವ ಸವಲತ್ತು ಶುಲ್ಕ (convenience fees) ವಿಚಾರವಾಗಿ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ ಸಿಟಿಸಿ) ಹಾಗೂ ಬ್ಯಾಂಕ್ ಗಳ

ನವದೆಹಲಿ: ಕಾರ್ಡ್ ಪೇಮೆಂಟ್ ಮಾಡುವ ವೇಳೆ ವಿಧಿಸಲಾಗುವ ಸವಲತ್ತು ಶುಲ್ಕ (convenience fees) ವಿಚಾರವಾಗಿ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ ಸಿಟಿಸಿ) ಹಾಗೂ ಬ್ಯಾಂಕ್ ಗಳ ನಡುವೆ ತಿಕ್ಕಾಟ ಉಂಟಾಗಿದ್ದು, 7 ಬ್ಯಾಂಕ್ ಗಳ ಡೆಬಿಟ್ ಕಾರ್ಡ್ ಪೇಮೆಂಟ್ ಗೇಟ್ ವೇ ಗೆ ಐಆರ್ ಸಿಟಿಸಿ ನಿಷೇಧ ವಿಧಿಸಿದೆ. 
ಹೆಚ್ ಡಿಎಫ್ ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಕೆನರಾ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್ ಗಳ ಕಾರ್ಡ್ ಗಳ ಮೂಲಕ ಗ್ರಾಹಕರು ಐಆರ್ ಸಿಟಿಸಿ ಯಲ್ಲಿ ಪೇಮೆಂಟ್ ಗೇಟ್ ವೇ ಮೂಲಕ ಪಾವತಿ ಮಾಡುವಂತಿಲ್ಲ. 
ಆನ್ ಲೈನ್ ಮೂಲಕ ಟಿಕೆಟ್ ಖರೀದಿ ಮಾಡುವ ಗ್ರಾಹಕರಿಗೆ ವಿಧಿಸಲಾಗುತ್ತಿದ್ದ ಸವಲತ್ತು ಶುಲ್ಕ ( convenience fees)ಯ ಅರ್ಧಭಾಗವನ್ನು ಹಂಚಿಕೊಳ್ಳುವಂತೆ ಬ್ಯಾಂಕ್ ಗಳಿಗೆ ಐಆರ್ ಸಿಟಿಸಿ ನಿರಂತರವಾಗಿ ಬ್ಯಾಂಕ್ ಗಳನ್ನು ಕೇಳುತ್ತಿತ್ತು. ಆದರೆ ಬ್ಯಾಂಕ್ ಗಳು ಶುಲ್ಕವನ್ನು ಹಂಚಿಕೊಳ್ಳಲ್ಲು ಸಿದ್ಧವಿರಲಿಲ್ಲ. ಈ ಹಿನ್ನೆಲೆಯಲ್ಲಿ  7 ಬ್ಯಾಂಕ್ ಗಳ ಪೇಮೆಂಟ್ ಗೇಟ್ ವೇ ಯನ್ನು ನಿಷೇಧಿಸಲಾಗಿದೆ. 
ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಈ ವಿಚಾರವಾಗಿ ಐಆರ್ ಸಿಟಿಸಿ ಹಾಗೂ ಭಾರತೀಯ ರೈಲ್ವೆಯೊಂದಿಗೆ ಮಾತುಕತೆ ನಡೆಸುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ