ದೇಶ

ಫಿನ್ ಲ್ಯಾಂಡ್ ನಲ್ಲಿ ಕಣ್ಮರೆಯಾಗಿದ್ದ ಚೆನ್ನೈ ಟೆಕ್ಕಿ ಮೃತದೇಹ ಪತ್ತೆ

Raghavendra Adiga
ಚೆನ್ನೈ: ಫಿನ್ ಲ್ಯಾಂಡ್ ನಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದ ಚೆನ್ನೈ ನ ಇಂಜಿನುಯರ್ ಹರಿಸೂದನ್ ಮೃತಪಟ್ಟಿದ್ದಾರೆ.
ಹರಿಸೂದನ್ ಅವರ ಮೃತದೇಹ  ಫಿನ್ ಲ್ಯಾಂಡ್ ರಾಜಧಾನಿ ಹೆಲ್ಸಿಂಕಿಯ ಸರೋವರ ಪ್ರದೇಶದಲ್ಲಿ ಪತ್ತೆಯಾಗಿದೆ.  ಟಾಟಾ ಕನ್ಸಲ್‍ಟೆನ್ಸಿ ಸರ್ವಿಸ್ (ಟಿಸಿಎಸ್) ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರ ಮೃತದೇಹ ಪತ್ತೆಯಾಗಿರುವುದನ್ನು ಫಿನ್ ಲ್ಯಾಂಡ್ ನ ಭಾರತದ ರಾಯಭಾರಿ ವಾಣಿ ರಾವ್ ಖಚಿತಪಡಿಸಿದ್ಧಾರೆ. ಹೆಲ್ಸಿಂಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
"ಈ ಘಟನೆಯಿಂದ ನಮಗೆ ಆಘಾತವಾಗಿದೆ ಮತ್ತು ಅವನ ಕುಟುಂಬ ಮತ್ತು ಸ್ನೇಹಿತರಿಗೆ ನಮ್ಮ ಸಾಂತ್ವನವನ್ನು ವ್ಯಕ್ತಪಡಿಸಲು ತಿಳಿಸಬಯಸುತ್ತೇವೆ" ಟಿಸಿಎಸ್ ಸಂಸ್ಥೆ ವಕ್ತಾರರು ಹೇಳಿದ್ದಾರೆ.  2013.ರಿಂದಲೂ ಹರಿಸೂಧನ್ ಟಿಸಿಎಸ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಹೆಲ್ಸಿಂಕಿ ಪೋಲೀಸರು ಸೆಪ್ಟೆಂಬರ್ 8 ರಂದು 17:40ರ ವೇಳೆಗೆ ಫ್ರೆಡ್ರಿಂಕಿಕುಟು ನಲ್ಲಿ ಇದ್ದ  ಹರಿಸೂಧನ್ ರ ಕೊನೆಯ ಭಾವಚಿತ್ರವನ್ನು ಬಿಡುಗಡೆ ಮಾಡಿದ್ದರು.
SCROLL FOR NEXT