ಶೌಚಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ 
ದೇಶ

ಸ್ವಚ್ಚ ಭಾರತ ಅಭಿಯಾನದಡಿ ಮೋದಿಯಿಂದ ವಾರಣಾಸಿಯ ಷಹನ್ ಷಹಾಪುರ್ ನಲ್ಲಿ ಶೌಚಾಲಯಕ್ಕೆ ಶಂಕುಸ್ಥಾಪನೆ

ಉತ್ತರ ಪ್ರದೇಶದ ವಾರಣಾಸಿಯ ಷಹನ್ ಷಹಾಪುರ್ ಗ್ರಾಮದಲ್ಲಿ ಸ್ವಚ್ಚ ಭಾರತ ಅಭಿಯಾನದಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿದರು.

ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯ ಷಹನ್ ಷಹಾಪುರ್ ಗ್ರಾಮದಲ್ಲಿ ಸ್ವಚ್ಚ ಭಾರತ ಅಭಿಯಾನದಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಉತ್ತರ ಪ್ರದೇಶ ರಾಜ್ಯಪಾಲ ರಾಮ್ ನಾಯಕ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗ್ರಾಮೀಣಾಭಿವೃದ್ಧಿ ಸಚಿವ ಮಹೇಂದ್ರ ಸಿಂಗ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರ ನಾಥ್ ಪಾಂಡೆ ಅವರು ಉಪಸ್ಥಿತರಿದ್ದರು.
ಪಶು ಆರೋಗ್ಯ ಮೇಳಕ್ಕೆ ಭೇಟಿ ನೀಡಿದ  ಪ್ರಧಾನ ಮಂತ್ರಿ, ಷಹನ್ ಷಹಾಪುರ್ ಗ್ರಾಮದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ತಮ್ಮ ಎರಡು ದಿನಗಳ ಭೇಟಿಗಾಗಿ ನಿನ್ನೆ ವಾರಣಾಸಿಗೆ ಆಗಮಿಸಿದ್ದರು.
ಪ್ರಧಾನಿ ಇಂದು ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ ಫಲಾನುಭವಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಿದ್ದಾರೆ.
ಪ್ರಧಾನಿ ಮೋದಿ ತಮ್ಮ ನಿನ್ನೆಯ ಕಾರ್ಯಕ್ರಮದಲ್ಲಿ ವಾರಣಾಸಿ ಇಂದ ಗುಜರಾತಿನ ವಡೋದರಾಗೆ ನೇರ ರೈಲು ಸೇವೆಯನ್ನು ಉದ್ಘಾಟಿಸಿದ್ದರು. ದೀನ್ ದಯಾಳ್ ಹಸ್ತಕಾಲಾ ಸಂಕುಲ್ ನ್ನು ಅನಾವರಣಗೊಳಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

India-Japan Annual Summit 2025: ಟೋಕಿಯೋ ತಲುಪಿದ ಪ್ರಧಾನಿ ಮೋದಿ, ಅದ್ಧೂರಿ ಸ್ವಾಗತ

ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಿಗೆ ಬಹುಮಾನದ ಮೊತ್ತ ಹೆಚ್ಚಳ: ಒಲಿಂಪಿಕ್ಸ್ ಪದಕ ಗೆದ್ದರೆ 5 ಕೋಟಿ ನಗದು; CM

BJP, RSS ನಡುವೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಸಂಘರ್ಷ ಇಲ್ಲ: ಮೋಹನ್ ಭಾಗವತ್

ಹೋಟೆಲ್‌ನಲ್ಲಿ ಮದ್ಯಪಾನಕ್ಕೆ ಅವಕಾಶ: ಪ್ರಶ್ನಿಸಿದ ಇನ್‌ಸ್ಪೆಕ್ಟರ್ ಮೇಲೆ ಹಲ್ಲೆ; ಕಾನ್‌ಸ್ಟೆಬಲ್ ಅಮಾನತು

Nation survey: ಇಂದೇ ಲೋಕಸಭೆ ಚುನಾವಣೆ ನಡೆದರೆ NDA ಎಷ್ಟು ಸ್ಥಾನ ಗೆಲ್ಲುತ್ತೆ ಗೊತ್ತಾ?

SCROLL FOR NEXT